ಮೋದಿ ಆಡಳಿತ ಖಂಡಿಸಿ ಕರಾಳ ದಿನಾಚರಣೆ


ಬೆಂಗಳೂರು, ಜೂ.೧- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಏಳು ವರ್ಷಗಳ ಆಡಳಿತ ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡ ಕರಾಳ ದಿನಾಚರಣೆ ಆಚರಿಸಿದರು.
ನಗರದಲ್ಲಿಂದು ಆಪ್ ಕಚೇರಿ ಮುಂಭಾಗ ಜಮಾಯಿಸಿದ ಮುಖಂಡರು, ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಏಳು ವರ್ಷ
ಗಳನ್ನು ವೈಫಲ್ಯ ಪೂರ್ಣವಾಗಿ ಪೂರೈಸಿದೆ.
ಇದನ್ನು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಏಳು ವರ್ಷದ ಆಡಳಿತ ಏಳೇಳು ಜನ್ಮಕ್ಕೂ ಬೇಡ ಎನ್ನುವಷ್ಟು ಜನರು ಹತಾಶರಾಗಿದ್ದಾರೆ.
ನೋಟ್ ಬ್ಯಾನ್, ಅವೈಜ್ಞಾನಿಕ ಜಿ.ಎಸ್.ಟಿ, ರೈತ ವಿರೋಧಿ ಕೃಷಿ ಮಸೂದೆಗಳು, ನಿರುದ್ಯೋಗ, ಕೊರೋನ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವೈಫಲ್ಯ, ಹೀಗೇ ಸಾಲು ಸಾಲು ಮೂರ್ಖ ನಿರ್ಧಾರಗಳಿಂದ ಜನತೆಯನ್ನು ಪಡಬಾರದ ಕಷ್ಟಕ್ಕೆ ಸಿಲುಕಿಸಿದ್ದೇ ನರೇಂದ್ರ ಮೋದಿಯವರ ಸಾಧನೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಉಸ್ತುವಾರಿ ಶಾಂತಲಾ ದಾಮ್ಲೆ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಅಯೂಬ್ ಖಾನ್, ಜ್ಯೋತಿಷ್ ಕುಮಾರ್, ಸಿಂಥಿಯಾ ಸ್ಟೀಫನ್, ಡಾ.ಕೇಶವ್, ಅನೀಶ್ ರತ್ನಮ್ ಮೊದಲಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.