ಮೋದಿ ಆಡಳಿತ,ಯಡಿಯೂರಪ್ಪ ನಾಯಕತ್ವಕ್ಕೆ ಸಂದ ಜಯ: ಸಂತೋಷ ಗಡಂತಿ

ಚಿಂಚೋಳಿ ಮೇ 2: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಜನಪರ ಯೋಜನೆ, ರೈತಪರ, ಮಹಿಳೆಯರ ಹಾಗೂ ಯುವಜನತೆಯ, ಹಿತದೃಷ್ಟಿಯಿಂದ ಒಳ್ಳೆಯ ಆಡಳಿತ ನೀಡುತ್ತಿರುವುದು ಹಾಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಒಳ್ಳೆಯ ನಾಯಕತ್ವ, ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚಿ ಬಸವಕಲ್ಯಾಣದ ಮತದಾರ ಬಿಜೆಪಿಗೆ ಮತ ನೀಡಿದ್ದಾರೆ, ಎಂದು ಸಂತೋಷ ಗಡಂತಿ ಹರ್ಷ ವ್ಯಕ್ತಪಡಿಸಿದ್ದಾರೆ, ಶರಣು ಸಲಗರ ಅವರು ಕಲ್ಯಾಣ ನಾಡು ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಭರವಸೆ ಇದೆ, ಮುಂಬರುವ ದಿನಗಳಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಯಡಿಯೂರಪ್ಪನವರ ಕನಸು, ಮುಂಬರುವ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ವಿಶ್ವಾಸವನ್ನು ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಸಂತೋಷ ಗಡಂತಿ. ವ್ಯಕ್ತಪಡಿಸಿದ್ದಾರೆ