ಮೋದಿಯ ಈ ಮೌನಕ್ಕೆ ಬಿಜೆಪಿ ಉತ್ತರವೇನೂ: ಚಂದ್ರಶೇಖರ್

ಮೈಸೂರು:ಏ.22:- ಗೌತಮ್ ಅದಾನಿ ಉದ್ಯಮದ ಬ್ರಹ್ಮಾಂಡದಲ್ಲಿ ಪ್ರಧಾನಿ ನರೇಂದ್ರಮೋದಿಯವರ ಪಾತ್ರ ಹಾಗೂ 2022ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಪ್ರಧಾನಿ ನರೇಂದ್ರಮೋದಿ ತಾಳಿರುವ ಮೌನಕ್ಕೆ ನಾವು ಇವರನ್ನು ಮೌನಿ ಮೋದಿ ಅನ್ನಬಾರದೇಕೆ ಎಂದು ಹಿರಿಯ ರಾಜಕೀಯ ತಜ್ಞ ಪೆÇ್ರ.ಬಿ.ಕೆ.ಚಂದ್ರಶೇಖರ್ ಪ್ರಶ್ನಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ?ಮಾತಿಗಿಂತ ಕೃತಿ ಮೇಲು? ಎಂಬಂತೆ ತಮ್ಮ ಕಾಯಕನಿಷ್ಠೆಗೆ ಒತ್ತು ನೀಡಿದ್ದರು. ದೇಶವನ್ನು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ?ಮೌನಿ ಸಿಂಗ್’ ಎಂದು ಬಿಜೆಪಿ ಜರಿಯುತ್ತಿದ್ದರು. ಆದರೆ ಈಗ ಕಳೆದ ತಿಂಗಳು ಮುಕ್ತಾಯಗೊಂಡ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ತೀಕ್ಷ್ಯ ಹಾಗೂ ನೇರವಾದ ಮೇಲಿನ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸಲಾಗಿತ್ತು. ಆದರೆ, ಮೋದಿಯವರ ಮೌನ ನಿಲುವಿಗೆ ಎನೂ ಹೇಳಬೇಕೆಂದು ಬಿಜೆಪಿಯೇ ತಿಳಿಸಲಿ ಎಂದು ವ್ಯಂಗ್ಯವಾಡಿದರು.
ವಿದೇಶಗಳಲ್ಲಿ ಇದೇ ಪ್ರಧಾನಿಯವರು ?ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದು ಪುನರುಚ್ಚಾರ ಎನ್ನುತ್ತಾರೆ. ಆದರೆ, 2002ರ ಗುಜರಾತ್ ಕೋಮುಗಲಭೆ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿದ ಒಂದೇ ಕಾರಣಕ್ಕೆ ಮಾದ್ಯಮ ಸಂಸ್ಥೆಯ ಮೇಲೆ ಕಂದಾಯ ಇಲಾಖೆ ದಾಳಿ ನಡೆಸಿತು. ಇದನ್ನು ಭಾರತೀಯ ಹಾಗೂ ಪಾಶ್ಚಿಮಾತ್ಯ ಮಾಧ್ಯಮ ಸಂಸ್ಥೆಗಳು(ವಾಚ್‍ಡಾಗ್) ತೀವ್ರವಾಗಿ ಖಂಡಿಸಿ, ಇದನ್ನು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿ ಹಾಗೂ ಮಾಧ್ಯಮಗಳನ್ನು ?ಬೆದರಿಸುವ ತಂತ್ರ’ ಎಂದು ತಮ್ಮ ಸಂಪಾದಕೀಯಗಳಲ್ಲಿ ಉಲ್ಲೇಖಿಸಿವೆ ಎಂದರು.
ತಮ್ಮ ವಿರುದ್ಧದ ಯಾವುದೇ ಆರೋಪಗಳನ್ನು ತಳ್ಳಿಹಾಕುವುದು ಅಥವಾ ನಿರ್ಲಕ್ಷಿಸುವುದು ಮೋದಿ ಅವರಿಗೆ ಹೊಸದೇನಲ್ಲ. ಸಂಸತ್‍ನಲ್ಲಿ ವಿಪಕ್ಷಗಳ ಒಕ್ಕೊರಲಿನ ತೀಕ್ಷ್ಯ ಪ್ರಶ್ನೆಗಳಿಗೆ “ನಾನೊಬ್ಬನೇ ಎಲ್ಲಾ ವಿಪಕ್ಷಗಳನ್ನು ಮಟ್ಟಹಾಕುತ್ತೇನೆ,” ಎಂಬ ಮೋದಿ ಅವರ ಮಾತಿಗೆ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿಯ ಸಂಸತ್ ಸದಸ್ಯರು ಪ್ರಚಂಡ ಚಪ್ಪಾಳೆ ತಟ್ಟಿದರು! ‘ಭಾರತ ಪ್ರಜಾತಂತ್ರದ ಜನ್ಮಧಾತೆ’? ಸಂಸತ್, ಎಂದರೆ ಮೋದಿ ಅವರ ಮಾತಿಗೆ ಚಪ್ಪಾಳೆ ಹೊಡೆದು, ಕೇಕೆ ಹಾಕುವ 300ಕ್ಕೂ ಹೆಚ್ಚು ಸದಸ್ಯರಿರುವ ಕೇವಲ ಆಡಳಿತಾರೂಢ ಬಿಜೆಪಿ ಪಕ್ಷ ಎಂದರ್ಥವಲ್ಲ. ಬದಲಿಗೆ, ಸಂಸತ್ ಎಂದರೆ ಅದನ್ನು ಒಂದು ಸಂಸ್ಥೆಯಾಗಿ ಗ್ರಹಿಸುವುದರ ಜೊತೆಗೆ, ಸಂಸತ್ತಿನೊಳಗೆ ‘ಅಲ್ಪಸಂಖ್ಯಾತರ ಬಹುಸಂಖ್ಯಾತರ ದಬ್ಬಾಳಿಕೆ ಅಲ್ಲ’ ಎಂಬ ಸಾಂವಿಧಾನಿಕ ತತ್ವವನ್ನು ತಮ್ಮ ನಡವಳಿಕೆಯ ಮೂಲಕ ಆಡಳಿತಾರೂಢ ಪಕ್ಷದ ಸದಸ್ಯರು ತೋರಿಸಬೇಕಿದೆ. ಚರ್ಚೆ ಮತ್ತು ಸಂವಾದಗಳು ಯಾವುದೇ ಒಂದು ಮುಕ್ತ ಸರಕಾರದ ಹೆಗ್ಗುರುತಾಗಿದೆ. ಆದರೆ, ವಾಸ್ತವವಾಗಿ ಇಂದಿನ ಸಂಸತ್‍ಗೆ ಸರಕಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ವಕ್ತಾರರಾದ ಎಚ್.ಎ.ವೆಂಕಟೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.