ಮೋದಿಯಿಂದ ಬಡವರ ಕಲ್ಯಾಣ ಶೂನ್ಯ : ಸಚಿವ ತಂಗಡಗಿ ಆರೋಪ


ಸಂಜೆವಾಣಿ ವಾರ್ತೆ
ಯಲಬುರ್ಗಾ:ಮಾ,23- ಪ್ರಧಾನಿ ಮೋದಿಯಿಂದ ದೇಶದ ಪ್ರಗತಿ ಶೂನ್ಯವಾಗಿದೆ ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಆಪಾದಿಸಿದರು.         ಅವರು ಶುಕ್ರವಾರ ಸಂಜೆ ಯಲಬುಗ೯ದ ಬ್ಲಾಕ್ ಕಾಂಗ್ರೆಸ್ ಕಾಯಾ೯ಲಯದಲ್ಲಿ  ಲೋಕಸಭಾ ಚುನಾವಣಾ ನಿಮಿತ್ತ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದರು. ದೇಶದ ಬಡವರು, ಹಿಂದುಳಿದವರು ಹಾಗೂ ದೀನ ದಲಿತರ ಸುಧಾರಣೆ ಮಾತು ಬರೀ ಸುಳ್ಳಾಗಿದೆ ೧೦ ವರುಷ ಮೋದಿಯವರು ದೇವರು ಗುಡಿ ಗುಂಡರದ ಹೆಸರಿನಲ್ಲಿ ರಾಜಕಾರಣ ಮಾಡಿದ್ದಾರೆ ಹೊರತು ನಿಜವಾಗಿ ಸ್ಪಂದಿಸಿಲ್ಲ. ದೇಶದಲ್ಲಿ ಏನಾದರೂ ಅಭಿವೃದ್ದಿ ಆಗಿದೆ ಎಂದರೆ ಅದು ಕಾಂಗ್ರೆಸ್ ಸರಕಾರದಿಂದ ಸಾಧ್ಯ.  ಮೋದಿ ಅವರು ಜೀರೋ ಖಾತೆಗೆ ಹಣ ಹಾಕುತ್ತೇನೆಂದು ಸುಳ್ಳು ಹೇಳಿ ಹಣವೇ ಬರಲಿಲ್ಲ ಆ ಕಾರಣದಿಂದ ನಮ್ಮ ಸಿ.ಎಂ.ಸಿದ್ದರಾಮಯ್ಯನವರ್ರು ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ಬ್ಯಾಂಕ್ ಗೆ ಜಮಾ ಮಾಡುತ್ತಿದ್ದಾರೆ.
ಅಲ್ಲದೆ ರಾಷ್ಟ್ರೀಯ ಹೆದ್ದಾರಿ ,ಆಣೆಕಟ್ಟು ,ನೀರಾವರಿ, ಯೋಜನೆ ಮುಂತಾದ ಅಭಿವೃದ್ದಿ ಕಾಯ೯ಗಳನ್ನ ಕಾಂಗ್ರೆಸ್ ಸರಕಾರದ ಕೊಡುಗೆ ಎಂದರಲ್ಲದೆ ಇಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ. ಕೋರಿದರು. ಶಾಸಕ ಹಾಗೂ ಸಿ.ಎಂ. ಆಥಿ೯ಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಮಾತನಾಡಿ,  ತತ್ವ ಬದ್ದ  ಮತ್ತು ತ್ಯಾಗದ ಪಕ್ಷ ಅಂದ್ರೆ ಅದು ಕಾಂಗ್ರೆಸ್. ೧೦ ವರುಷ ಕಾಲ ಕೇಂದ್ರ ಸರಕಾರ ಆಳುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ    ಆಡಳಿತ ಬನ್ನುಸುದ ಅಲ್ಲದೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಯಾಗಿದ್ದ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ಒಲಿದು ಬಂದಾಗ ನಿರಾಕರಿಸಿದರು. ಅಂಥ ತ್ಯಾಗ ಮಯಿ ಮುಖಂಡರು ಕಾಂಗ್ರೆಸ್ ನಲ್ಲಿದ್ದಾರೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆ ಅಭ್ಯಥಿ೯ ರಾಜಶೇಖರ್ ಹಿಟ್ನಾಳ್ ಮಾತನಾಡಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಯಂಕಣ್ಣ ಯರಾಶಿ, ಬಸವರಾಜ್ ಉಳ್ಳಾಗಡ್ಡಿ, ವೀರನಗೌಡ ಬಲೂಟಗಿ,ಸತ್ಯ ನಾರಾಯಣ ಹರಪನಹಳ್ಳಿ,ಬೀ.ಎಂ.ಶಿರೂರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ನ ಹನುಮಂತ್ಗ ಗೌಡ್ರ, ಮಲ್ಲಮ್ಮ ಗೊಂದಿ,ಸಂಗಮೇಶ ಗುತ್ತಿ, ಶಿವನ ಗೌಡ್ರ ರಾಮರೆಡ್ಡಿ, ಶರಣಪ್ಪ ಗಾಂಜಿ, ರಸೂಲ್ ಸಾಬ್ ದಮ್ಮೂರು, ಈಶಪ್ಪ ಶಿರೂರು,    ಹುಲಗಪ್ಪ ವಡ್ಡರ, ರಶುರಾಮ್ ಸಕ್ರನ್ನ ವರ್ ಇದ್ದರು.ಹಂಪಯ್ಯ ಹಿರೇ ಮಠ ಹಾಗೂ ಸುಧೀರ್ ಕೊಲ ೯ಲ್ಲಿ ನಿರೂಪಿಸಿದರು.