ಮೋದಿಯವರ ಹ್ಯಾಟ್ರಿಕ್ ಗೆಲುವಿಗಾಗಿ ಬಿಜೆಪಿಯನ್ನು ಬೆಂಬಲಿಸಿ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03:  ದೇಶದ ಸುಭದ್ರತೆ, ಹಿಂದೂ ಸಂಸ್ಕೃತಿಯ ಸಂರಕ್ಷಣೆಗಾಗಿ ಭಾರತಿಯ ಜನತಾ ಪಾರ್ಟಿಯನ್ನು ಆರ್ಯ ವೈಶ್ಯ, ಬ್ರಾಹ್ಮಣ, ರಾಜಸ್ಥಾನಿ ಸಮಾಜದ ಜನತೆ ಬೆಂಬಲಿಸುತ್ತಾ ಬಂದಿದ್ದು. ಈ ಬಾರಿಯ ಚುನಾವಣೆಯಲ್ಲೂ ನೀವು ಪ್ರಧಾನಿ ಮೋದಿ ಅವರ ಹ್ಯಾಟ್ರಿಕ್ ಗೆಲುವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಅಭ್ಯರ್ಥಿ ಶ್ರೀರಾಮುಲು ಮನವಿ ಮಾಡಿದರು.
ನಗರದ ಅಗಡಿ ಮಾರಪ್ಪ ಕಾಂಪೌಂಡ್ ನಲ್ಲಿ ಜಿಲ್ಲಾ ಆರ್ಯ ವೈಶ್ಯ ಸಮಾಜ,  ಬಳ್ಳಾರಿ ಜಿಲ್ಲಾ ಬ್ರಾಹ್ಮಣ ಒಕ್ಕೂಟ, ರಾಜಸ್ಥಾನ ಸಮಾಜದ ಮುಖಂಡರ ಮತ್ತು ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತಿದ್ದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಲವು ಕಾರಣಗಳಿಂದ ನಾನು, ಸೋಮಶೇಖರ ರೆಡ್ಡಿ ಸೋತಿರಬಹುದು, ಆದರೆ ನಾವೆಂದೂ ಬಿಜೆಪಿಯೊಂದಿಗೆ ಸದಾ ನಿಮ್ಮ ಸೇವೆಯಲ್ಲಿರಲು ಬಯಸುತ್ತೇವೆ. ಲೋಕಸಭಾ ಸದಸ್ಯರಾಗಿ ದೇಶ, ರಾಜ್ಯ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲು ಸಂಕಲ್ಪ ಮಾಡಿದೆ. ಮೋದಿ ಅವರು ಈ ಬಾರಿ ನಾಲ್ಕು ನೂರು ಅಭ್ಯರ್ಥಿಗಳ ಗೆಲುವಿನಿಂದ ಆಡಳಿತಕ್ಕೆ ಬಂದ ನೂರು ದಿನಗಳಲ್ಲಿ ದೇಶದ ಸಮಗ್ರ ಬದಲಾವಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಇದಕ್ಕೆ ನಿಮ್ಮಲ್ಲರ ಸಹಕಾರ ಮುಖ್ಯ ಎಂದು ಮತಯಾಚನೆ ಮಾಡಿ. ಆರ್ಯವೈಶ್ಯ, ಬ್ಯಾಹ್ಮಣ, ರಾಜಸ್ತಾನಿ ಸಮಾಜಕ್ಕೆ ತಾವು ನೀಡಿದ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಅನಿಲ್‌ ಕುಮಾರ್, ನಗರದ ಮಾಜಿ ಶಾಸಕ ಸೋಮಶೇಖರರೆಡ್ಡಿ,  ಹಿರಿಯ ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್‌, ಡಾ. ರಮೇಶ್ ಗೋಪಾಲ್, ಪೋಲಾ ರಾಧಕೃಷ್ಣ, ಜೆ.ಜಯಪ್ರಕಾಶ್ ಗುಪ್ತ, ಸೊಂತ ಶ್ರೀಧರ್,   ಬಿ ಕೆ ಬಿ ಎನ್ ಮೂರ್ತಿ, ಪ್ರಕಾಶ್ ರಾವ್, ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್. ಅಶೋಕ್‌ ಕುಮಾ‌ರ್ ಮೊದಲಾದವರು ಇದ್ದರು.