ಮೋದಿಯವರ ಕನಸು ನನಸಾಯಿತು:ದೊಡ್ಡಗೌಡರ

ಚನ್ನಮ್ಮನ ಕಿತ್ತೂರ, ಜ23: ಸುಮಾರು 50 ವರ್ಷ ಕಾಂಗ್ರೇಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದರು. ದೇಶ ಅಭಿವೃದ್ಧಿ ಕಾಣಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಬಯಕೆಯು ಹುಟ್ಟಲಿಲ್ಲ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಜನ ಕಾಂಗ್ರೇಸ್ ಬೇಸತ್ತು ಬಿಜೆಪಿ ಆಯ್ಕೆ ಮಾಡಿಕೊಂಡರು. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಕನಸು ಇಂದು ಅದು ನನಸಾಗುವುದರ ಜೊತೆಗೆ ದೇಶವು ಅಭಿವೃದ್ಧಿ ಕಂಡಿದೆ. ದೇಶದ ರೈತರ ಮತ್ತು ಎಲ್ಲ ಸಮಾಜದ ಏಳಿಗೆ ಬಯಸುವ ಮೋದಿಜೀ ಮತ್ತೊಮ್ಮೆ ಎಲ್ಲರ ಆರ್ಶೀವಾದದಿಂದ ಪ್ರಧಾನಿಯಾಗಲೆಂದರು.