ಮೋದಿಯವರ ಅನುಕರಣೀಯದಿಂದ
ಎಸ್ಸಿ ಎಸ್ಟಿ ಮೀಸಲು ಹೆಚ್ಚಳ: ಬೊಮ್ಮಾಯಿ


ಬಳ್ಳಾರಿ, ನ.20: ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ವಾಲ್ಮೀಕಿ ಶ್ರೀಗಳು, ಬುದ್ದ ಬಸವ ಅಂಬೇಡ್ಕರ್ ಅವರು ಸ್ಪೂರ್ತಿಯಾಗಿದ್ದಾರೆ. ಅದೇ ರೀತಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂಬ ನಿರ್ಣಯ ಮಾಡಿದ್ದು ಮೊದಲಿಗೆ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರು. ಅದು ನಮಗೆ ಅನುಕರಣೀಯವಾದುದು ಎಂದು  ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಇದು ಪರಿರ್ತನಾ ಸಮಾವೇಶ, ಬದಲಾವಣೆಯ ಸಮಾವೇಶ ಎಂದ ಅವರು.  ರಾಜ್ಯದ ಇತಿಹಾಸದಲ್ಲಿ ಮುಸ್ಲಿಂ ರಾಜರುಗಳು, ಬ್ರಿಟೀಷರ್ ವಿರುದ್ದ ಹೋರಾಡಿದ್ದ ವಾಲ್ಮೀಕಿ  ಸಮದಾಯದ ಐತಿಹಾಸಿಕ ಪುರುಷರ ಹೆಸರನ್ನು ಸ್ಮರಿಸಿದರು.
ದೇಶವನ್ನು 60 ವರ್ಷ ಆಳಿದ ನೀವು ಏನು ಮಾಡಿದ್ದೀರಿ ಎಂದು  ಕಾಂಗ್ರೆಸ್ ನ್ನು ಪ್ರಶ್ನಿಸಿ. ಆ ಸಮುದಾಯದ ಜನತೆಗೆ ನೀವು ನೀಡಿದ ಶಿಕ್ಷಣದ ಪ್ರಮಾಣ ಎಷ್ಟು, ರಾಜಕೀಯ ಸ್ಥಾನಮಾನ ಎಷ್ಟು ಎಂದು ಕೇಳಿದ ಸಿಎಂ ಅವರು ಸಿದ್ದರಾಮಯ್ಯನವರೇ ಇನ್ನು ಮುಂದೆ ಈ ಸಮುದಾಯಗಳಿಗೆ ಅಹಿಂದ ಎಂದು ಮಾಡುವ ಮೋಸ ನಡೆಯುವುದಿಲ್ಲ ಎಂದರು.
ಎಸ್ ಸಿಪಿ, ಎಸ್ಟಿಪಿ ಯೋಜಬೆಯಡಿ ಈ ವರ್ಷ 28 ಸಾವಿರ ಕೋಟಿ ಅನುದಾನ ನೀಡಿದೆ. ಈ ಹಿಂದೆ 2013-14 ರಲ್ಲಿ ಕೇವಲ ಎಂಟು ಸಾವಿರ ಕೋಟಿ ರೂ ಅಂದಿನ ಸರ್ಕಾರ  ನೀಡಿತ್ತು. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ರೂ ನೀಡಿದೆ. ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ  ನೀಡಿದೆ. ರಾಜ್ಯದಲ್ಲಿ 101 ಎಸ್ಟಿ ಹಾಸ್ಟಲ್ ಗಳನ್ನು ಆರಂಭಿಸು ವುದಾಗಿ ಹೇಳಿದರು.
ರಾಮುಲು ಪೆದ್ದ ಅಲ್ಲ ಸಿದ್ರಾಮಣ್ಣಾ ನೀನು ಮುಖ್ಯ ಮಂತ್ರಿಯಾಗಿದ್ದಿ,  ಬುದ್ದಿವಂತರಾದ ನೀವು ಕುರುಬ ಸಮುದಾಯದ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಲಿಲ್ಲ. ಪೆದ್ದ ಶ್ರೀರಾಮುಲು ಸಹ ಮುಂದೆ ನಿಮ್ಮ ರೀತಿ ಸಿಎಂ ಆಗಬಹುದು ಎಂದರು.