ಮೋದಿಯವರ ಅಚ್ಛೆ ದಿನ್ ನಮಗೆ ಬೇಡ:

ಮರಿಯಮ್ಮನಹಳ್ಳಿ, ಜೂ.11: ಮೋದಿಯವರ ಅಚ್ಛೆದಿನ್ ನಮಗೆ ಬೇಡ, ಮೊದಲಿನ ದಿನಗಳನ್ನು ನಮಗೆ ವಾಪಸ್ ಬೇಕು ಎಂದು ಬೆಲೆ ಏರಿಕೆ ಕುರಿತು ಕೆ.ಪಿ.ಸಿ.ಸಿ ಸದಸ್ಯ ಶಿವಮೂರ್ತಿ ಮೋದಿ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮರಿಯಮ್ಮನಹಳ್ಳಿಯ ಪೆಟ್ರೋಲ್ ಬಂಕ್ ಆವರಣದಲ್ಲಿ ಗುರುವಾರ ಮೋದಿ ಸರ್ಕಾರದ ಆಡಳಿತದ ಬೆಲೆ ಏರಿಕೆಯ ಕಾರ್ಯ ವೈಖರಿಯನ್ನು ವಿರೋಧಿಸಿ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಬಂದಾಗಿನಿಂದ ದಿನನಿತ್ಯದ ಅಗತ್ಯ ವಸ್ತುಗಳ ಜೊತೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಮೋದಿ ಸರ್ಕಾರ ಬಂದಾಗಿನಿಂದ ಸುಳ್ಳಿನ ಕಂತೆಗಳನ್ನು ಬಿಟ್ಟರೆ ಜನತೆಗೆ ಯಾವುದೇ ಉಪಯೋಗವಾಗಿಲ್ಲ. ಜನತೆಗೆ ಮಾರಕವಾದ ಮೋದಿ ಸರ್ಕಾರ ನಮಗೆ ಬೇಕಿಲ್ಲ. ಈ ಕೂಡಲೇ ಮೋದಿ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ವಕ್ತಾರ ಸೋಮಪ್ಪ ಉಪ್ಪಾರ ಮಾತನಾಡಿ, ತೈಲ ಬೆಲೆಗಳ ಏರಿಕೆಯಲ್ಲಿ ಶತಕ ಬಾರಿಸಿದ ಮೋದಿ ಸರ್ಕಾರ ನಮಗೆ ಬೇಡ. ಈ ಸರ್ಕಾರದಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಮೋದಿ ಬರೀ ಸುಳ್ಳಿನ ರಾಜರಾಗಿದ್ದಾರೆ. ಸರ್ಕಾರದಿಂದ ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲೂ ಅನೇಕ ಬಡ ವರ್ಗದವರ ಪಾಲಿಗೆ ಮಾರಕವಾಗಿದ್ದಾರೆ ಎಂದರು. ಉದ್ಯೋಗ ಖಾತ್ರಿಯಲ್ಲಿ 100 ದಿನಗಳ ಕೆಲಸ ಕಾರ್ಯವನ್ನು 200 ದಿನಕ್ಕೆ ಹೆಚ್ಚಿಸಿ, ಇಲ್ಲವಾದಲ್ಲಿ ಕೂಲಿ ಕಾರ್ಮಿಕರಿಗೆ ಭತ್ಯೆ ನೀಡಿ ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬುಡೇನ್ ಸಾಬ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಜಾವಿದ್, ಸದಸ್ಯರಾದ ಹನುಮನಹಳ್ಳಿಯ ರಾಯಪ್ಪ, ಹನುಮಂತಪ್ಪ, ಮ.ಮಹಳ್ಳಿ ಕಾರ್ಯಕರ್ತರಾದ ಸಿರಾಜ್, ಮುಸ್ತಾಫ, ಸಮೀರ್, ಆಸೀಫ್, ಅಬ್ಬು,ರಾಜಾವಲಿ ಹಾಗೂ ಇತರರು ಇದ್ದರು.