ಮೋದಿಯವರು ಸಹ ಗ್ಯಾರಂಟಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ

ಮಾಗಡಿ. ಮಾ, ೨೮- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಈಗ ಮೋದಿ ಗ್ಯಾರಂಟಿ ಹೆಸರಿನಲ್ಲಿ ಮತ ಕೇಳುವ ಸ್ಥಿತಿಗೆ ಬಂದಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.
ಪಟ್ಟಣದ ಜ್ಯೋತಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ನರೇಂದ್ರ ಮೋದಿ ರವರು ಹೆಣ್ಣು ಮಕ್ಕಳು ನಮಗೆ ಮತ ನೀಡುವುದಿಲ್ಲ ಎಂಬ ಬಯದಿಂದ ಮೋದಿ ಗ್ಯಾರಂಟಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ, ನಮ್ಮ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣವನ್ನು ಕೊಡದೆ ಬೇರೆ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಹಣ ಕೊಡುತ್ತಿದ್ದಾರೆ ಇದನ್ನು ಕೇಳಿದ್ದಕ್ಕೆ ನನಗೆ ದೇಶ ವಿರೋಧಿ ಪಟ್ಟವನ್ನು ಕಟ್ಟಿದರು, ನಮ್ಮ ತೆರಿಗೆ ನಮ್ಮ ಹಕ್ಕು ಇಂದಿನ ಪೀಳಿಗೆಯ ಯುವಕರು ಇದರ ಬಗ್ಗೆ ಹೋರಾಟ ಮಾಡದಿದ್ದರೆ ನಮಗೆ ಸಾಕಷ್ಟು ಅನ್ಯಾಯವಾಗಲಿದೆ ಗ್ಯಾರಂಟಿಯನ್ನು ನಿಲ್ಲಿಸಬೇಕೆಂದು ಬಿಜೆಪಿಯವರು ಸುಪ್ರೀಂ ಕೋರ್ಟ್ ನಲ್ಲಿ ದಾವೇ ಹೋಗಿದ್ದಾರೆ ಎಂದು ತಿಳಿಸಿದರು.ಹತ್ತು ವರ್ಷ ಮೂರು ತಿಂಗಳಲ್ಲಿ ನಿಮ್ಮ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಕೇವಲ ೧೦ ಪೈಸೆಗೆ ಒಂದು ಲೀಟರ್ ನೀರು ಕೊಡುವ ಕೆಲಸವನ್ನು ಮಾಡಿದ್ದೇನೆ, ಮುಂದೆ ಕೂಡ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದು ನನ್ನ ಕೂಲಿ ಕೇಳುತ್ತಿದ್ದೇನೆ ಮತದಾರರು ನೀಡಬೇಕು ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನನಗೆ ಪ್ರೋತ್ಸಾಹ ಕೊಡಬೇಕೆಂದು ಮತದಾರರಲ್ಲಿ ಮನವಿ.
ಶಾಸಕ ಬಾಲಕೃಷ್ಣ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಪರಿಚಯ ಮಾಡಿಕೊಳ್ಳಲು ೧೦ ವರ್ಷ ಬೇಕು ಸಂಸದ ಡಿಕೆ ಸುರೇಶ್ ರವರು ಯಾವ ಪಂಚಾಯಿತಿಗೆ ಏನು ಕೆಲಸ ಆಗಬೇಕೆಂಬುದು ಅವರಿಗೆ ತಿಳಿದಿದೆ ಇಂತಹ ಸಂಸದರನ್ನು ಕಳೆದುಕೊಂಡರೆ ಕ್ಷೇತ್ರಕ್ಕೆ ನಷ್ಟ ಹೊರೆತು ಡಿ.ಕೆ.ಸುರೇಶ್ ರವರಿಗೆ ಅಲ್ಲ, ನೀರಾವರಿ ಯೋಜನೆಯಿಂದ ಹಿಡಿದು ಸಾಕಷ್ಟು ಯೋಜನೆಗಳನ್ನು ಮುಂದುವರಿಸಬೇಕಿದ್ದು ಸಂಸದ ಡಿಕೆ ಸುರೇಶ್ ರವರನ್ನು ಗೆಲ್ಲಿಸಿ ಕೊಡಿ ಎಂದು ಹೇಳಿದರು.
ಮಾಜಿ ಸಚಿವ ಎಚ್ ಎಮ್ ರೇವಣ್ಣ ಕಾಂಗ್ರೆಸ್ ಮುಖಂಡ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿದರು.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಜೆಡಿಎಸ್ ಮುಖ ಐಯಂಡಳ್ಳಿ ರಂಗಸ್ವಾಮಿ, ಬಿಜೆಪಿ ಪಕ್ಷದ ಜಯಮ್ಮ ಸೇರಿದಂತೆ ಚನ್ನಪಟ್ಟಣ ಬಿಡದಿ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಇದೆ ವೇಳೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಣಿಗನಹಳ್ಳಿ ಸುರೇಶ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಮುಖಂಡರಾದ ಜೆ.ಪಿ. ಚಂದ್ರೇಗೌಡ, ಎಂ.ಕೆ.ಧನಂಜಯ, ಪುರುಷೋತ್ತಮ್, ಕಲ್ಕೆರೆ ಶಿವಣ್ಣ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಬಿಡದಿ ಪ್ರಾಧಿಕಾರದ ಅಧ್ಯಕ್ಷ ನಟರಾಜು, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ ಭಾಗವಹಿಸಿದ್ದರು.