ಮೋದಿಯವರಿಂದ ದೇಶದಲ್ಲಿ ರಾಮರಾಜ್ಯ:ಖೂಬಾ

ಬೀದರ:ಜ.24:ಮೋದಿಜಿಯವರಿಂದ ಭಾರತದಲ್ಲಿ ರಾಮರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕೇಂದ್ರ ಸಚಿವರು ಹಾಗೂ ಸಂಸದರಾದ ಶ್ರೀ ಭಗವಂತ ಖೂಬಾರವರು, ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ನುಡಿದರು.

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರ ಪ್ರಾಣ ಪ್ರತಿಷ್ಠಾಪನೆಗೆ ಸಿಕ್ಕ ಅಭೂತ ಪೂರ್ವ ಬೆಂಬಲವೆ ಸಾಕ್ಷಿಯೆಂದರು. ಆದರೆ 5000 ವರ್ಷಗಳ ಇತಿಹಾಸವುಳ್ಳ ಹಿಂದು ಸಂಪ್ರದಾಯ, ಸಂಸ್ಕøತಿಯ ಮೇಲೆ ಬ್ರೀಟಿಷರು, ಮುಸ್ಲಿಂರವರು ಆಕ್ರಮಣ ಮಾಡಿ, ನಮ್ಮಲ್ಲಿರುವ ಚೈತನ್ಯ, ಅದ್ಭುತ ಶಕ್ತಿ, ಸ್ವಾಭಿಮಾನಕ್ಕೆ ತರಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲಾ, ಕಾರಣ ಹಿಂದುಗಳಲ್ಲಿದ್ದ ಆದ್ಯಾತ್ಮಿಕ ಶಕ್ತಿ, ದರ್ಮದ ಮೇಲಿರುವ ನಿಷ್ಠೆ, ಧೃಢ ನಂಬಿಕೆಯೆ ಕಾರಣವೆಂದು ತಿಳಿಸಿದರು. 

ಸ್ವಾತಂತ್ರ್ಯ ಬಂದ ಮೇಲೆ, ಈ ದೇಶದ ಪ್ರಧಾನಿ ಸರ್ಧಾರ ವಲಲ್ಭಭಾಯಿ ಪಟೇಲರಾಗಬೇಕಿತ್ತು ಆದರೆ ಜವಹಾರಲಾಲ್ ನೇಹರು ಆದರೂ ಅಲ್ಲಿಂದಲೂ ನಮ್ಮ ದೇಶದ ಇತಿಹಾಸ ಸರಿಯಾಗಿ ತಿಳಿಸುವ ಕೆಲಸವಾಗಲಿಲ್ಲಾ, ಕೇವಲ ಮುಸ್ಲಿಂ ಓಲೈಕೆಯೆ ಮೊದಲ ಆದ್ಯತೆ ಆಗಿತ್ತು, ನಮ್ಮ ದೇಶದ ವೀರ ಸಾಮ್ರಾಟರ ಬಗ್ಗೆ ಹೇಳದೆ, ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಬಂದ ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ, ಮಹ್ಮದ ಘೋರಿಯಂಥವರ ಬಗ್ಗೆ ಅವರನ್ನ ವೈಭವಿಕರಿಸಿ ತೊರಿಸಲಾಯಿತು, ಅರ್ಧಂಬರ್ಧ ಇತಿಹಾಸ ತಿಳಿಸಿ, ನಮ್ಮ ವೀರ ಸಾಮ್ರಾಟರಾದ ಶಿವಾಜಿ, ಮಹಾರಾಣಾ ಪ್ರತಾಪ, ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಮದಕರಿ ನಾಯಕ ಮುಂತಾದವರ ಶೌರ್ಯದ ಬಗ್ಗೆ ಎಲ್ಲೂ ಹೇಳಿಯೆ ಇಲ್ಲಾ. ಆದರೆ ಇಂದು ನಮ್ಮ ಮಕ್ಕಳಿಗೆ, ನಮ್ಮ ಜನತೆಗೆ ಸತ್ಯ ಇತಿಹಾಸ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಜವಹಾರಲಾಲ್ ನೇಹರೂ ನಂತರ ಇಂಧಿರಾಗಾಂಧಿ, ರಾಜಿವಗಾಂದಿ ಹಿಗೆ ಒಂದೆ ಕುಟುಂಬದಲ್ಲಿ ಜಾಸ್ತಿ ಅಧಿಕಾರವಿತ್ತು, ಇವರು ಕೇವಲ ಮುಸ್ಲಿಂರನ್ನು ಓಲೈಸುವುದು ಹಿಂದುಗಳನ್ನು ಬಗ್ಗಿ ಬಡಿಯುವುದು ಆಗಿತ್ತು, ಆದರೆ ಇವಾಗ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿದೆ, ಪ್ರತಿಯೊಂದು ಜಾತಿ, ಮತಗಳಿಗೆ ಗೌರವಿಸಲಾಗುತ್ತಿದೆ ಮತ್ತು  ಈ ದೇಶದ ಸಂಸ್ಕøತಿ, ಸಂಪ್ರದಾಯಕ್ಕೆ ಒತ್ತು ನೀಡಲಾಗುತ್ತಿದೆ ಹಾಗೂ ಎಲ್ಲಾ ಧರ್ಮಗಳನ್ನ ಗೌರವಿಸಲಾಗುತ್ತಿದೆ, ಈ ದೇಶಕ್ಕೆ ಮೋದಿಯಂತ ಪ್ರಧಾನಮಂತ್ರಿ ಸಿಕ್ಕಿರುವುದು ನಮ್ಮೇಲ್ಲರ ಸೌಭಾಗ್ಯವಾಗಿದೆ ಎಂದು ತಿಳಿಸಿದರು.

ಸೊನಿಯಾ ಗಾಂದಿ, ಮನಮೊಹನ ಸಿಂಗ್ ನೇತೃತ್ವದಲ್ಲಿ 2004 ರಿಂದ 2014ರವರೆಗೆ ದೇಶ ಅಧೋಗತಿಗೆ ಬಂದಿತ್ತು, 2014 ರ ನಂತರ ಭಾರತ ವಿಶ್ವುಗುರುವಾಗುತ್ತಾ ಸಾಗಿದೆ, ಜನರ ಜೀವನ ಮಟ್ಟ ಸುಧಾರಿಸಿದೆ, 13.5 ಕೋಟಿ ಜನರು ಬಡತನ ರೆಖೆಗಿಂತ ಮೇಲೆ ಬಂದಿದ್ದಾರೆ, ನಮ್ಮಲ್ಲಿಯೆ 12 ಹೊಸ ಹೆದ್ದಾರಿಗಳು, ರೈಲ್ವೆಗಳು ಆಗಿವೆ, ಸೈನಿಕ ಶಾಲೆ, ಏರಪೋರ್ಟ, ಆಳಂದನಲ್ಲಿ ಮಣ್ಣು ಪರೀಕ್ಷಾ ಕೇಂದ್ರ, ಈ ತರಹ ಹತ್ತಾರು ನಮ್ಮ ಬೀದರ ಲೋಕಸಭಾ ಕ್ಷೇತ್ರದಲ್ಲಿ ಆಗಿವೆ ಎಂದು ತಿಳಿಸಿದರು.

ರೈತರ ಖಾತೆಗೆ ನೇರವಾಗಿ ಇಂದು ದುಡ್ಡು ಜಮಾ ಮಾಡುತ್ತಿರುವುದು ಮೋದಿ ಸರ್ಕಾರ, ಬಡವರಿಗೆ ಅಕ್ಕಿ ಕೊಡುತ್ತಿರುವುದು ಮೋದಿ ಸರ್ಕಾರ, ಮಹಿಳೆಯರಿಗೆ ಗೌರವ ನೀಡುತ್ತಿರುವುದು ಮೋದಿ ಸರ್ಕಾರ, ಧರ್ಮ ಸಂಸ್ಕøತಿ ಕಾಪಾಡುತ್ತಿರುವುದು ಮೋದಿ ಸರ್ಕಾರ, ದೇಶವನ್ನು ಸರ್ವತೋಮುಖ ಅಭಿವೃದ್ದಿ ಮಾಡುತ್ತಿರುವುದು ಮೋದಿ ಸರ್ಕಾರ, ಮೋದಿ ಸರ್ಕಾರದ ಎಲ್ಲಾ ಯೋಜನೆಗಳು ತಮ್ಮೇಲ್ಲರಿಗೂ ಮುಟ್ಟಿಸಲು ಹಗಲಿರುಳು ಶ್ರಮ ಪಡುತ್ತಿದ್ದೇನೆ, ಆದ್ದರಿಂದ ಇಂದು ತಮ್ಮೇಲ್ಲರಿಗೂ ಮೋದಿ ಸರ್ಕಾರದ ಯೋಜನೆಗಳು ತಲುಪುತ್ತಿವೆ, ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವೇಲ್ಲರೂ ನನ್ನನ್ನು ಮತ್ತೊಮ್ಮೆ ಆಶೀರ್ವಾದ ಮಾಡಿ, ಮೋದಿಜಿಯವರಿಗೆ 3ನೇ ಬಾರಿಗೆ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂದು ವಿನಂತಿಸಿಕೊಂಡರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಆನಂದರಾವ ಪಾಟೀಲ್, ವಿರಣ್ಣ ಮಂಗಾಣೆ ಧುತ್ತರಗಾಂವ, ಅಣ್ಣಾರಾವ ಪಾಟೀಲ್ ಕವಲಾಗ, ಸಂಜಯ ಮಿಸ್ಕಿನ್, ಸಂತೋಷ ಹಾದಿಮನಿ, ಮಹೇಶ ಗೌಳಿ, ಲಕ್ಷ್ಮಿಕಾಂತ ಹೇಮಾಜಿ, ಗುರು ಲಾವಣಿ, ಹಣಮಂತರಾವ ಹಣಮಶೇಟ್ಟಿ, ಮಹಾಲಿಂಗ ಪೂಜಾರಿ, ಉದಯ ಪಾಟೀಲ್, ಶರಣು, ಪ್ರಭುಲಿಂಗ ಪಾಟೀಲ್ ಝಳಕಿ, ಶಿವಾನಂದ ಪಾಟೀಲ್, ಬಸವರಾಜ ಬಿರಾದರ, ಮೋತಿರಾಮ ಪವಾರ ಹಾಗೂ ಬ್ಯಾಂಕ್, ಅಂಚೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.