ಮೋದಿಯಲ್ಲ ಸಿದ್ದರಾಮಯ್ಯ ಮಾದರಿ ಬರಲಿ: ರಾಜೀವ್

ಸಂಜೆವಾಣಿ ನ್ಯೂಸ್
ಮೈಸೂರು: ಏ.12:- ಪಂಚ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಸರ್ವ ಜನರೂ ಸಂತೃಪ್ತರಾಗಿದ್ದಾರೆ.ಲೋಕಸಭಾ ಚುನಾವಣೆಯ ಬಳಿಕ ದೇಶಕ್ಕೆ ಮೋದಿ ಮಾದರಿಯಲ್ಲ, ಸಿದ್ದರಾಮಯ್ಯ ಮಾದರಿ ಜಾರಿಗೆ ಬರಲಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.
ಕಾಂಗ್ರೆಸ್ ಭವನದಲ್ಲಿ ನಗರ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಮತ್ತು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಮೈಸೂರು ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ನಡೆದ ಮೊದಲ ಚುನಾವಣೆಯ ಹುಮಸ್ಸನ್ನು 2024ರ ಚುನಾವಣೆಯಲ್ಲಿ ಕಾಣುತ್ತಿದ್ದೇವೆ ಎಂದರು.
ಒಂದು ವರ್ಷದ ಆಯವ್ಯಯದ ಶೇ. 20ರಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಲಾಗಿದೆ. ದೇಶದ ಯಾವುದೇ ರಾಜ್ಯವೂ ಇಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡುತ್ತಿಲ್ಲ. ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತಾಡಲು ಫಲಾನುಭವಿಗಳಿಗೆ ಹಿಂಜರಿಕೆ ಇದೆ. ಈಗ ಮಹಿಳೆಯೊಬ್ಬರು ಅಡವಿಟ್ಟ ತಾಳಿ ಬಿಡಿಸಿಕೊಂಡ, ರ್ಯಾಂಕ್ ಪಡೆಯಲು ಗೃಹಲಕ್ಷ್ಮೀ ಹಣ ಸಹಕಾರಿಯಾಯಿತು ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಸುಳ್ಳು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ಉತ್ತರ ಕೊಡಬೇಕು ಎಂದು ತಿಳಿಸಿದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಈ ಚುನಾವಣೆ ನಮ ಅಸ್ತಿತ್ವದ ಚುನಾವಣೆಯಾಗಿದೆ. ಇದನ್ನು ಗೆಲ್ಲಬೇಕು. ಇಲ್ಲದಿದ್ದರೆ ನಾವೆಲ್ಲರೂ ಮತ್ತೆ ಗುಲಾಮಗಿರಿಗೆ ಹೋಗುತ್ತೇವೆ. ಬಿಜೆಪಿಯನ್ನು ಎಲ್ಲರೂ ಒಮತದಿಂದ ವಿರೋಧಿಸಬೇಕು. ಏ. 26ರಂದು ತಪ್ಪದೇ ಮತದಾನ ಮಾಡಬೇಕು ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಮಾರಂಭ ಉದ್ಘಾಟಿಸಿದರು. ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಎಂ.ಸಿ. ವೇಣುಗೋಪಾಲ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮುಡಾ ಅಧ್ಯಕ್ಷ ಮರಿಗೌಡ, ಮಾಜಿ ಶಾಸಕ ನಂಜುಂಡಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮುಖಂಡ ಎಂ.ನಾಗರಾಜ್, ಮಾಜಿ ಮೇಯರ್ ಪುರುಷೋತ್ತಮ್, ಅನಂತು, ಟಿ.ಬಿ. ಚಿಕ್ಕಣ್ಣ, ಶಿವಶಂಕರ್, ಜಿಲ್ಲಾಧ್ಯಕ್ಷ ನಾಗಭೂಷಣ್, ಒಬಿಸಿ ಅಧ್ಯಕ್ಷ ಎನ್.ಆರ್. ನಾಗೇಶ್, ಶ್ರೀಕಾಂತ್, ಶೇಖರ್, ಈಶ್ವರ್ ಚಕ್ಕಡಿ, ಎಂ.ಎನ್. ಮಹದೇವ, ಚಂದ್ರು, ಎಚ್.ಎಸ್.ಪ್ರಕಾಶ್, ಅಭಿನಂದನ್, ಯೋಗೇಶ್ ಉಪ್ಪಾರ್, ರಮೇಶ್, ಕಮಲಾ, ರಾಜೇಶ್ಚರಿ, ಲಕ್ಷ್ಮೀ, ಮೊಗಣ್ಣಚಾರ್, ಸುನಿಲ್ ಭಾಗವಹಿಸಿದ್ದರು.
ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ ಸಂವಿಧಾನ ಪೀಠಿಕೆ ಓದಿದರು. ಈಶ್ವರ್ ಚಕ್ಕಡಿ ವಂದೇ ಮಾತರಂ ಗೀತೆ ಹಾಡಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮ್ ಸ್ವಾಗತಿಸಿದರು.
ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‍ಗೆ ಮತ ಕೊಡಿ: ಎಚ್‍ಸಿಎಂ
ಇಂದು ದೇಶದ ಸಂವಿಧಾನ ಅಪಾಯಕಾರಿ ಬಿಜೆಪಿಯ ಕೈಯಲ್ಲಿದೆ. ಅದನ್ನು ಕಾಂಗ್ರೆಸ್ ಗೆ ನೀಡದಿದ್ದರೆ ನಿಮ ಬದುಕು ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ. ಸಂವಿಧಾನ ಸಮ ಸಮಾಜ ಹಾಗೂ ಮೂಲಭೂತ ಹಕ್ಕುಗಳನ್ನು ತಿಳಿಸುತ್ತದೆ. ಜತೆಗೆ ಪ್ರತಿಯೊಬ್ಬರು ಸಮಾನರು ಹಾಗೂ ಸಮಾನ ಹಕ್ಕುವುಗಳ್ಳವರು ಎಂಬುದನ್ನು ಹೇಳುತ್ತದೆ. ಆದರೆ, ಇಂದು ದೇಶದ ಆರ್ಥಿಕತೆ ಕೆಲವೇ ಕೆಲವರ ಕೈಯಲ್ಲಿದ್ದು, ದುಡಿಯುವ ವರ್ಗ ಜೀವನ ನಡೆಸಲು ಕಷ್ಟವಾಗಿದೆ. ಈ ಕಾರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ ಬಡಜನರಿಗೆ ತಾತ್ಕಾಲಿಕ ನೆರವು ನೀಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಿಸಿದರೆ ನಿಮಗೆ ಭದ್ರತೆಯ ಜೀವನ ನೀಡುವ ದ್ಯೇಯ ಹಾಗೂ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡಲಿದೆ. ಇದಕ್ಕಾಗಿ ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಕಾಂಗ್ರೆಸ್ ಕೈ ಬಲ ಪಡಿಸಿ ಎಂದು ಮನವಿ ಮಾಡಿದರು.