ಮೋತ್ಕರ್ ಪರ ಪ್ರಚಾರ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಮಾರ್ಟ್ ಸಿಟಿ

ಬಳ್ಳಾರಿ, ಏ.20: ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದ್ದು ಇದರಿಂದ ಕೇಂದ್ರ ಸರ್ಕಾರದತ ಸಹಕಾರದಿಂದ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲಿದೆಂಬ ಭರವಸೆಯನ್ನು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ನೀಡಿದರು.
ನಗರದ 24ನೇ ವಾರ್ಡ್ ಅಭ್ಯರ್ಥಿ ಶ್ರೀನಿವಾಸ ಮೋತ್ಕರ್ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಅವರು, ಬಳ್ಳಾರಿ ನಗರದ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಯೋಜನೆ ಸಿದ್ದಪಡಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪಾಲಿಕೆಯಲ್ಲಿ ಅಭಿವೃದ್ಧಿಯೇ ತನ್ನ ಧ್ಯೇಯ ಮಾಡಿಕೊಂಡಿರುವಂತಹ ಮೋತ್ಕರ್ ಅವರಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಬಂದರೆ ಅಂತಹ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಲಿದೆಂದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.