ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆಗಾಗಿ ಸರತಿಸಾಲು

ದಾವಣಗೆರೆ.ಏ.೨೭; ಜಿಲ್ಲೆಗೆ ೬ ಸಾವಿರ ಲಸಿಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಲಸಿಕೆ ನೀಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು ಇಂದು ಮಧ್ಯಾಹ್ನದವರೆಗೂ ಸುಮಾರು 300 ಜನಕ್ಕೆ ಲಸಿಕೆ ನೀಡಲಾಗಿದೆ.ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಹಾಗೂ ಲಸಿಕೆ ಪಡೆಯುವುದರಿಂದ ರೋಗನಿರೋಧಕ‌ ಶಕ್ತಿ ಹೆಚ್ಚುತ್ತದೆ.ನೀವು ಲಸಿಕೆ ಬಗ್ಗೆ ಅರಿವು ಮೂಡಿಸಬೇಕು.ಅಲ್ಲದೇ ಅಕ್ಕಪಕ್ಕದ ಮನೆಯವರಿಗೂ ಲಸಿಕೆ ಪಡೆಯಲು ಹೇಳುವಂತೆ ಸಲಹೆ ನೀಡಿದರು.ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆ ಅರಿವು ಮೂಡಿದೆ.ಸ್ವಯಂ ಪ್ರೇರಿತರಾಗಿ ಆಗಮಿಸಿ ಲಸಿಕೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವವರಿಗೆ ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆ ನೀಡಲಾಗುತ್ತಿದೆ.ಈಗಾಗಲೇ ತಾಲ್ಲೂಕು ಆರೋಗ್ಯ ಕೇಂದ್ರಗಳು , ವಿನೋಬನಗರದ ಸೂಪರ್ ಕೇಂದ್ರಗಳಿಗೆ ಲಸಿಕೆ ರವಾನಿಸಲಾಗಿದೆ . ಮಾರುಕಟ್ಟೆ,, ಚಾಮರಾಜಪೇಟೆ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕೆ.ಬಿ.ಬಡಾವಣೆಯ ನಗರ ಆರೋಗ್ಯ ಹೆಚ್ಚಿನ ಬೇಡಿಕೆ ಬಂದಿದೆ.ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತದೆ ಎಂದರು.ಈ ವೇಳೆ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಹಾಗೂ ಜಿಲ್ಲಾಸ್ಪತ್ರೆ ಅಧೀಕ್ಷಕರು ಇದ್ದರು.ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆದುಕೊಂಡರು.