ಮೋಡಿ ಮಾಡಿದ ಮೋಹಪುರ ನಾಟಕ

ಮಸ್ಕಿ,ಜ.೫-ಇಲ್ಲಿಯ ಗಚ್ಚೀನ ಮಠ ಬಳಿ ತಾಲೂಕು ಸರಕಾರಿ ನೌಕರರ ಸಂಘದ ಸದಸ್ಯರು ಪ್ರದರ್ಶನ ಮಾಡಿದ ಮೋಹ ಪುರ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು ನಾಟಕ ನೋಡಲು ಅನೇಕ ಜನ ಜಮಾಯಿಸಿದ್ದರು.
ರಂಜಾನ್ ಸಾಬ್ ಉಳ್ಳಾಗಡ್ಡಿ ನಿರ್ದೆಶನದ ಮೋಹ ಪುರ ನಾಟಕದ ನನ್ನ ಪಾತ್ರಗಳಲ್ಲಿ ಶಿಕ್ಷಕರು ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಪುರಸಭೆ ಅಧ್ಯಕ್ಷೆ ವಿಜಯ ಲಕ್ಷ್ಮೀಪಾಟೀಲ್ ನಾಟಕ ಪ್ರದರ್ಶನಕ್ಕೆ ಚಾಲನೆ ಕೊಟ್ಟರು ಈ ವೇಳೆ ಗಚ್ಚೀನ ಮಠದ ವರ ರುದ್ರಮುನಿ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಪ್ರತಿಬಿಂಬವಾಗಿ ನಾಟಕಗಳಲ್ಲಿ ನೋಡಬಹುದು ನಾಟಕಗಳು ಸಮಾಜದ ಕನ್ನಡಿ ಎಂದು ನುಡಿದರು.
ಸಮುದಾಯ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವೆಂದ್ರಗೌಡ ಮಾತನಾಡಿ ಕಾದಂಬರಿ ಆಧರಿತ ಮೋಹಪುರ ನಾಟಕದಲ್ಲಿ ಗ್ರಾಮೀಣ ಬದುಕಿನ ಹಳ್ಳಿ ರಾಜಕೀಯ, ಅಧಿಕಾರ, ಶ್ರೀಮಂತಿಕೆಯ ಅಟ್ಟಹಾಸ, ನೈತಿಕ ಶಕ್ತಿಯ ಪರೀಕ್ಷೆ ಕುರಿತು ನಾಟಕವಾಗಿದ್ದು ಹಳ್ಳಿಗಳ ಬದುಕನ್ನು ನಾಟಕಕಾರ ಸುಂದರವಾಗಿ ಚಿತ್ರಿಸಿದ್ದಾರೆ ಎಂದರು.
ಉಪನ್ಯಾಸಕ ಮಹಾಂತೇಶ ಮಸ್ಕಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ರಂಗ ನಿರ್ದೆಶಕ ರಂಜಾನ್ ಸಾಬ್ ಉಳ್ಳಾಗಡ್ಡಿ, ಸರಕಾರಿ ನೌಕರರ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ರುದ್ರಮುನಿ ಇದ್ದರು.

(೫,ಜ. ಎಂಎಸ್ಕೆ ಪೋಟೋ೦೧)