ಮೋಟೆಬೆನ್ನೂರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು.23: ತಾಲೂಕಿನ ಮೋಟೆಬೆನ್ನೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪಾರ್ವತೆಮ್ಮ ಗಂಗಾಧರ ನಾಯಕ್ ಮತ್ತು ಉಪಾಧ್ಯಕ್ಷರಾಗಿ ಮೀನಾಕ್ಷಿ ನಾಗಪ್ಪ ಅಂಗಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಿಡಿಪಿಓ ಡಾ. ಪಾರ್ವತೆಮ್ಮ ಹುಂಡೇಕಾರ ತಿಳಿಸಿದರು.
ಬುಧವಾರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಾರ್ವತೆಮ್ಮ ಗಂಗಾಧರ ನಾಯಕ್ 17ಮತಗಳನ್ನು ಹಾಗೂ ಗಂಗಮಾಳವ್ವ ಶಿವಪ್ಪ ಪಚ್ಚಗೇರ 3ಮತಗಳನ್ನು ಪಡೆದಿದ್ದು, ಒಂದು ಮತ ಅಸಿಂಧುವಾಗಿದೆ. ಅಂತಿಮವಾಗಿ 14ಮತಗಳ ಅಂತರದಿಂದ ಪಾರ್ವತೆಮ್ಮ ಗಂಗಾಧರ ನಾಯಕ್ ಜಯಶಾಲಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ನಾಗಪ್ಪ ಅಂಗಡಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಿವಪ್ಪ ಕುಳೆನೂರು, ಈರಣ್ಣ ಬಳ್ಳಾರಿ, ದಾನಪ್ಪ ಬಳ್ಳಾರಿ, ಸಂಜಯಕುಮಾರ ಶಿಗ್ಲಿ, ಲಲಿತಾ ಎಲಿ, ಶ್ರೀದೇವಿ ನೆಗಳೂರ, ರಾಜಾ ಹಾವನೂರು, ವೀಣಾ ನೆಗಳೂರ, ಮಾರುತಿ ಬ್ಯಾಟಪ್ಪನವರ, ಹೂವಕ್ಕ ಹಿತ್ತಲಮನಿ, ಉಮೇಶ ಹಾವೇರಿ, ಗದಿಗೆವ್ವ ಹಾದರಗೇರಿ, ಪಾರ್ವತೆಮ್ಮ ಬಳಿಗಾರ, ರಮೇಶ ಬಟ್ಟಲಕಟ್ಟಿ, ಮಂಜುನಾಥ ಹಿರೇಮಠ, ಮಮತಾಜಬಿ ದೇವಿಹೊಸೂರ, ಅನಿತಾ ಕುರುಡಮ್ಮನವರ, ಹಜರತಮಹಬೂಬ ನದಾಫ್, ಮುಖಂಡರಾದ ಶಿವಬಸಪ್ಪ ಕುಳೆನೂರು, ವಿಜಯ ಬಳ್ಳಾರಿ, ಪಿಡಿಓ ಸತೀಶ ಮೂಡೇರ, ಅಕೌಂಟೆಂಟ್ ನಾಗಪ್ಪ ಪೀಠದ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.