ಮೋಜು-ಮಸ್ತಿಗೆ ಬೈಕ್ ಕಳವು ಖದೀಮನ ಸೆರೆ


ಬೆಂಗಳೂರು,ಜು.೨೭- ಮೋಜು-ಮಸ್ತಿಗಾಗಿ ದ್ವಿ-ಚಕ್ರವಾಹನ ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು ೧೧ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರ ಮುಖ್ಯರಸ್ತೆಯ ಬಿ,ಎನ್, ಕಿಶನ್ ಚೌದರಿ(೨೧)ಬಂಧಿತ ಆರೋಪಿಯಾಗಿದ್ದು,ಆತನಿಂದ ೧೧ ಲಕ್ಷ ಮೌಲ್ಯದ ೧೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ವಿದ್ಯಾರಣ್ಯಪುರದ ಆರ್ಕೆಡ್ ಲೇಔಟ್ ನ (೫೩) ಅವರು ಕಳೆದ ಜು.೯ ರಂದು ರಾತ್ರಿ ೯ರ ವೇಳೆಯಲ್ಲಿ ಮನೆಯ ಗೇಟ್ ಒಳಗೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಿಸಿದ ವಿದ್ಯಾರಣ್ಯಪುರ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು, ಚಿಕ್ಕಬಳ್ಳಾಪುರ ಜಿಲ್ಲೆಯ ವಾಪಸಂದ್ರ ಮೂಲದ ಆರೋಪಿಯನ್ನು
ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ-೪ಯಶವಂತಪುರ,
ಯಲಹಂಕ ಉಪನಗರ ತಲಾ ೨ ಅಮೃತಹಳ್ಳಿ,ಬಾಗಲೂರು, ಚಿಕ್ಕಜಾಲ,ಸುಬ್ರಮಣ್ಯನಗರ,ಸೂಲದೇವನಹಳ್ಳಿ ತಲಾ ಒಂದು ಸೇರಿ ೧೩ ಪ್ರಕರಣಗಳು ಪತ್ತೆಯಾಗಿವೆ ಎಂದರು.