ಮೋಜು ಮಸ್ತಿಗಾಗಿ ಬೈಕ್ ಕಳವು ಖದೀಮನ ಸೆರೆ

ಬೆಂಗಳೂರು,ನ.೨೨- ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಕೆಆರ್‌ಪುರಂ ಪೊಲೀಸರು ಬಂಧಿಸಿ ೧೨ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಜಿಎಫ್‌ನ ಭಾರತಿಪುರಂನ ಸೈಯದ್‌ಸಲ್ಮಾನ್ (೨೫) ಬಂಧಿತ ಆರೋಪಿಯಾಗಿದ್ದು, ಆತನಿಂದ ೧ ಆಟೋ, ೭ ಬೈಕ್‌ಗಳು ಸೇರಿ ೧೨ ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಆರೋಪಿಯು ಮೋಜು ಮಸ್ತಿ ಜೀವನಕ್ಕಾಗಿ ಬೈಕ್‌ಗಳ ಹ್ಯಾಂಡಲ್ ಮುರಿದು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.
ಆರೋಪಿಯು ಕಳವು ಮಾಡಿದ ವಾಹನಗಳನ್ನು ಸ್ವಗ್ರಾಮದ ತೋಟ
ದ ಮನೆಯಲ್ಲಿ ಬಚ್ಚಿಡುತ್ತಿದ್ದ. ಅಲ್ಲಿಂದ ವಿವಿಧೆಡೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಎಂದರು.
ಕೆಆರ್‌ಪುರಂನ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಬೆನ್ನತ್ತಿದ ಇನ್ಸ್‌ಪೆಕ್ಟರ್ ಗೋರ್‌ಪಡೆ ಯಲ್ಲಪ್ಪ, ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯು ಕೆಆರ್‌ಪುರ, ಹೆಣ್ಣೂರು, ಬಾಣಸವಾಡಿ, ಯಲಹಂಕ ಉಪನಗರ, ಹೊಸಕೋಟೆ, ಕೋಲಾರ, ಮುಳಬಾಗಿಲುವಿನಲ್ಲಿ ವಾಹನ ಕಳವು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.