ಮೋಚಾ ಚಂಡಮಾರುತ ತೀವ್ರ: ಎಲ್ಲೆಡೆ ಕಟ್ಟೆಚ್ಚರ

ನವದೆಹಲಿ,ಮೇ.14- ಚಂಡಮಾರುತ ಮೋಚಾ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಕ್ಖಾಲಿ ಸಮುದ್ರ ತೀರದಲ್ಲಿ ರಕ್ಷಣಾ ತಂಡಗಳನ್ನು ನಾಗರಿಕರ ಸುರಕ್ಷತೆಗಾಗಿ ನಿಯೋಜಿಸಿ ಕಟ್ಟೆಚ್ಚರವಹಿಸಲಾಗಿದೆ.

‘ಮೋಚಾ’ ಚಂಡಮಾರುತ ಗಂಭೀರ ಚಂಡಮಾರುತವಾಗಿ ಬಲಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 8 ರಕ್ಷಣಾ ತಂಡ, ಮತ್ತು 200 ಸಿಬ್ಬಂಧಿಯನ್ನು ಪಶ್ಚಿಮ ಬಂಗಾಳದ ದಿಘಾಗೆ ಕಳುಹಿಸಿದೆ.

“ಮೋಚಾ” ಚಂಡಮಾರುತದ ಚಂಡಮಾರುತವಾಗಿ ತೀವ್ರಗೊಳ್ಳುತ್ತಿದ್ದಂತೆ, ನಾಗರಿಕ ರಕ್ಷಣಾ ತಂಡಗಳನ್ನು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಗಳ ಬಕ್ಖಾಲಿ ಸಮುದ್ರದ ಬೀಚ್‍ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕ ರಕ್ಷಣಾ ತಂಡಗಳ ಸದಸ್ಯರು ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಜಾಗರೂಕರಾಗಿರಲು ಸೂಚಿಸಿದ್ದು ಕಡಲತೀರ ಅಥವಾ ಸಮುದ್ರದ ಸಮೀಪವಿರುವ ಪ್ರದೇಶಗಳಿಗೆ ಭೇಟಿ ನೀಡದಂತೆ ನಿರಂತರವಾಗಿ ಎಚ್ಚರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿ ಉತ್ತಮವಾಗಿಲ್ಲ. ಸಾರ್ವಜನಿಕರು ಮತ್ತು ಪ್ರವಾಸಿಗರು ಜಾಗರೂಕರಾಗಿರಿ ಮತ್ತು ಬೀಚ್‍ಗೆ ಬರದಂತೆ ನಾವು ನಿರಂತರವಾಗಿ ಎಚ್ಚರಿಸುತ್ತಿದ್ದೇವೆ ಎಂದು ನಾಗರಿಕ ರಕ್ಷಣಾ ಅಧಿಕಾರಿ ಅನ್ಮೋಲ್ ದಾಸ್ ತಿಳಿಸಿದ್ದಾರೆ.

ಮೊದಲು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 8 ಗುಂಪುಗಳು ಮತ್ತು 200 ರಕ್ಷಕರನ್ನು ಪಶ್ಚಿಮ ಬಂಗಾಳದ ದಿಘಾಗೆ ಕಳುಹಿಸಿದ್ದು, ‘ಮೋಚಾ’ ಚಂಡಮಾರುತ ಗಂಭೀರ ಚಂಡಮಾರುತವಾಗಿ ಬಲಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಬಾಂಗ್ಲಾದೇಶದ ಹವಾಮಾನ ಇಲಾಖೆ ಹೊರಡಿಸಿದ ಇತ್ತೀಚಿನ ಬುಲೆಟಿನ್ ಪ್ರಕಾರ ಚಟ್ಟೋರ್‍ಗ್ರಾಮ್ ಮತ್ತು ಬರಿಶಾಲ್ ವಿಭಾಗಗಳ ಕರಾವಳಿ ಪ್ರದೇಶಗಳ ಮೇಲೆ ಸೈಕ್ಲೋನ್ ಮೋಚಾ ಬಾಹ್ಯ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಚಂಡಮಾರುತ ಚಟ್ಟೋಗ್ರಾಮ್ ಬಂದರಿನ ದಕ್ಷಿಣ-ನೈಋತ್ಯಕ್ಕೆ 490 ಕಿಲೋಮೀಟರ್, ಕಾಕ್ಸ್ ಬಜಾರ್ ಬಂದರಿನ ನೈಋತ್ಯಕ್ಕೆ 410 ಕಿಲೋಮೀಟರ್, ಮೊಂಗ್ಲಾ ಬಂದರಿನ ದಕ್ಷಿಣಕ್ಕೆ 530 ಕಿಲೋಮೀಟರ್ ಮತ್ತು ಪೈರಾ ಬಂದರಿನಿಂದ ದಕ್ಷಿಣಕ್ಕೆ 460 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ.