ಮೋಕಾ ರೋಡ್ ಗೆ ಇನ್ಮುಂದೆ ಟೋಲ್


ಎನ್.ವೀರಭದ್ರಗೌಡ
ಬಳ್ಳಾರಿ, ನ.29: ಗಾಲಿ ಜನಾರ್ಧನರೆಡ್ಡಿ ಅವರು ಮೂಲಭೂತ ಸೌಲಭ್ಯಗಳ ಸಚಿವರಾಗಿದ್ದಾಗ ಚತುಷ್ಪತ ರಸ್ತೆಯನ್ನಾಗಿ ನಿರ್ಮಿಸಿದ್ದ ಬಳ್ಳಾರಿ- ಮೋಕ ರಸ್ತೆಗೆ ಇನ್ಮುಂದೆ ಟೋಲ್ ಕಲೆಕ್ಷನ್ ಮಾಡಲಿದೆ. ಇದಕ್ಕಾಗಿ ಉದ್ದೇಶಿತ ವಿಮಾನ ನಿಲ್ದಾಣದ ನಿವೇಶನದ ಬಳಿ  ಶಿವಪುರ ಮತ್ತು ಸಿರಿವಾರ ಕ್ರಾಸ್ ಮಧ್ಯ ಟೋಲ್ ಕಲೆಕ್ಷನ್  ಕೇಂದ್ರ ನಿರ್ಮಿಸಿದೆ. ಬಹತೇಕ ಡಿ.ಒಂದರಿಂದ ಟೋಲ್ ಸಂಗ್ರಹ ಆರಂಭಗೊಳ್ಳಯವ ಸಾಧ್ಯತೆ ಇದೆ.
ತೀರಾ ಕೆಟ್ಟದಾಗಿದ್ದ ಈ ರಸ್ತೆಯನ್ನು ಕೋಟ್ಯಾಂತರ ರೂ ವೆಚ್ಚ ಮಾಡಿ ಬಳ್ಳಾರಿಯ ಕೆಇಬಿ ಸರ್ಕಲ್ ನಿಂದ  ಚಾಗನೂರು ಕ್ರಾಸ್ ವರೆಗೆ ಚತುಷ್ಪತ ರಸ್ತೆಯನ್ನಾಗಿ ಅಲ್ಲಿಂದ ಆಂದ್ರದ ಗಡಿ ಭಾಗದ ವರೆಗೆ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು.
ಈ ರಸ್ತೆ ನಿರ್ಮಿಸಿ ಈಗ ಹತ್ತು ವರ್ಷ ಕಳೆದಿದೆ. ಉತ್ತಮ ಗುಣ ಮಟ್ಟದಿಂದ ನಿರ್ಮಿಸಿದ್ದರಿಂದ ಇಂದಿಗೂ ಉತ್ತಮ ರಸ್ತೆಯಾಗಿದೆ. ಜನತೆ ಒಂದು ರೀತಿ ಕಣ್ಣು ಮುಚ್ಚಿಕೊಂಡು ಸಂಚರಿಸುವಂತೆ ರಸ್ತೆ ಇತ್ತು. ಇದರಿಂದ ಜನತೆ ಯಾವುದೇ ಶುಲ್ಕ ಇಲ್ಲದೆ ಈವರಗೆ ಬಳಸಿದ್ದರು. ಕರ್ನೂಲ್, ಮಂತ್ರಾಲಯಕ್ಕೆ ಹೋಗುವ ವಾಹನಗಳೆಲ್ಲ ಹಗರಿ ಕಡೆ ಬಿಟ್ಟು ಈಕಡೆಯಿಂದಲೇ ಸಂಚರಿಸುತ್ತಿದ್ದವು.
ಈ ಭಾಗದ ಮೋಕಾ, ಬಸರಕೋಡು, ಸಿಂದವಾಳ, ಗೋನಾಳ್, ಎರ್ರಗುಡಿ  ಮೊದಲಾದ ಗ್ರಾಮಗಳ ಜನತೆ ಈ ಉತ್ತಮ ರಸ್ತೆ ಬಳಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ ಈಗಿನ ಸಿದ್ದರಾಮಯ್ಯ ಸರ್ಕಾರ ಈಗ ಈ ರಸ್ತೆ ಬಳಕೆಗೆ ಟೋಲ್ ಸಂಗ್ರಹಿಸಲು ಮುಂದಾಗಿದೆ. ಯಾಕೆ ಎಂದರೆ ಇನ್ನು ಮುಂದೆ ರಸ್ತೆಯ ನಿರ್ವಹಣೆಗೆ ಎಂದು ಹೇಳಲಾಗುತ್ತಿದೆ.
ಈಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಟೋಲ್ ಸಂಗ್ರಹದ ಕೇಂದ್ರ ಸ್ಥಾಪಿಸಿದೆ. ದ್ವಿಚಕ್ರ, ತ್ರಿಚಕ್ರ, ಆಂಬುಲೆನ್ಸ್ ಗೆ ಟೋಲ್ ಇಲ್ಲವಂತೆ.
ಉಳಿದಂತೆ  ನಾಲ್ಕು ಚಕ್ರದ ಕಾರು, ವ್ಯಾನ್, ಜೀಪುಗಳಿಗೆ ಒಂದು ಬಾರಿಗೆ 20 ರೂ,  ಲಘುವಾಹನಗಳಿಗೆ 30 ರೂ, ಎರೆಡು ಆಕ್ಸಲ್ ಲಾರಿ, ಬಸ್ಸಿಗೆ 65 ರೂ,    ಮೂರು ಆಕ್ಸಲ್ ಲಾರಿಗೆ 70, ನಾಲ್ಕರಿಂದ ಆರ್ ಆಕ್ಸಲ್ ಲಾರಿಗೆ  105 ರೂ, ಅದಕ್ಕಿನ ಆಕ್ಸಲ್ ವಾಹನಕ್ಕೆ  130 ರೂ ನಿಗಧಿ ಪಡಿಸಿದೆ.
ಪಾಸ್ಟ್ ಟ್ಯಾಗ್ ಗೇಟ್ ರೆಡಿತಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಉಚಿತವಾಗಿ ಓಡಾಡಿದ್ದ ವಸಹನ ಸವಾರರು ಇನ್ನು ಮುಂದೆ ಟೋಲ್ ಕಟ್ಟಲು ರೆಡಿಯಾಗಬೇಕಿದೆ.
ಟೋಲ್ ಸರಿಯಲ್ಲ:
ಈ ಹಿಂದಿನ‌ ನಮ್ಮ‌ ಬಿಜೆಪಿ ಸರ್ಕಾರ ಈ ರಸ್ತೆ ನಿರ್ಮಿಸಿ ಈವರಗೆ ಒಂದು ರೂ ಟೋಲ್ ವಸೂಲಿ ಮಾಡಿಲ್ಲ. ಜನರಿಂದ ಸಂಗ್ರಹಿಸಿದ ತೆರಿಗೆಯ ಹಣದಲ್ಲಿ ಸರ್ಕಾರ ನಿರ್ಮಿಸಿರುವ ಈ ರಸ್ತೆಗೆ ಟೋಲ್ ಸಂಗ್ರಹ ಸರಿಯಲ್ಲ.
ಕಾರಪುಡಿ ಮುದ್ದನಗೌಡ, ಮೋಕಾ.
ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ನಮ್ಮ ದುಡಿಮೆಗೆ ಕೊಕ್ಕೆ ಬಿದ್ದಿದೆ. ಅದರ ಜೊತೆಗೆ ಈಗ ಟೋಲ್ ಕಟ್ಟಿ ಎಂದರೆ ಹೇಗೆ.
ಹನುಂಮತಪ್ಪ, ಟಾಟಾ ಏಸ್ ಚಾಲಕ,  ಮೋಕ.