ಮೋಕಾ ಗ್ರಾಪಂ ಸಮಾನ‌ಮತ ಲಾಟರಿ ಮೂಲಕ ಆಯ್ಕೆ

ಬಳ್ಳಾರಿ, ಡಿ.31: ತಾಲೂಕಿನ ಮೋಕಾ ಗ್ರಾಮ ಪಂಚಾಯತಿಯ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಡಿ.ರಾಮಪ್ಪ ಮತ್ತು ದೇವಿಂದ್ರಪ್ಪ ಎನ್ನುವವರು ಸಮಾನ ಮತ ಅಂದರ ತಲಾ 357 ಮತಗಳು ಪಡೆದಿದ್ದರಿಂದ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಲಾಟರಿ ಎತ್ತುವುದರ ಮೂಲಕ ರಿಟರ್ನಿಂಗ್ ಅಧಿಕಾರಿಗಳು ವಿಜೇತರನ್ನು ಘೋಷಿಸಿದರು.
ಡಿ.ರಾಮಪ್ಪ ಅವರನ್ನು ವಿಜೇತರೆಂದು ಘೋಷಿಸಲಾಯಿತು. ವಿಜೇತರಾಗುತ್ತಲೇ ಡಿ.ರಾಮಪ್ಪ ಅವರು ಖುಷಿಯಿಂದ ಕೈಮುಗಿದರು. ದೇವಿಂದ್ರಪ್ಪನವರಿಗೆ ಕೈಕುಲುಕಿದರು.