
(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ನಾಗೇಂದ್ರ ಪರ ದಲಿತ ಮುಖಂಡರು, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಎಸ್ ಎಸ್ ಮುಖಂಡ ಗೋವರ್ಧನ್ ಮೊದಲಾದವರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಓಣಿ ಓಣಿಗಳಲ್ಲಿ ಸಂಚರಿಸಿ. ವಿಶೇಷವಾಗಿ ದಲಿತ ಕೇರೆಗಳಲ್ಲಿ ಸಂಚರಿಸಿ ನೂರಾರು ಜನರೊಂದಿಗರ ಸಭೆ ನಡೆಸಿ. ಯಾತಕ್ಕಾಗಿ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು, ಬಿಜೆಪಿಯಿಂದ ತಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾದ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಬಿಜೆಪಿ ಆಡಳುತದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತಿಳಿಸಿ. ಎಲ್ಲರನ್ನು ಸಮಭಾವದಿಂದ ಕಾಣುವ ಪಕ್ಷ ಕಾಂಗ್ರೆಸ್ ಮತ್ತು ಅಭ್ಯರ್ಥಿ ನಾಗೇಂದ್ರ ಆಗಿದ್ದಾರೆ. ಅದಕ್ಕಾಗಿ ಹಸ್ತದ ಗುರ್ತಿಗೆ ಮತ ಹಾಕಿ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೆಚ್.ವೀರಭದ್ರಪ್ಪ, ಹೆಚ್.ಹೊನ್ನೇಶ್, ಕುಮಾರ, ಉಮೇಶ್, ಎ.ಕೆ.ನಾಗರಾಜ್ ಜಾಲಿಬೆಂಚಿ, ಹುಲುಗಪ್ಪ, ಟಿ.ದುರುಗಪ್ಪ, ಬಿ.ದುರುಗಪ್ಪ, ಜಂಬಯ್ಯ ಮೊದಲಾದವರು ಇದ್ದರು.
One attachment • Scanned by Gmail