ಮೋಕಾದಲ್ಲಿ ಅಂಚೆ ಜನಸಂಪರ್ಕ ಅಭಿಯಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.10:  ಜನಸಾಮಾನ್ಯರಿಗೆ ಅಂಚೆ ಇಲಾಖೆಯ ಸೇವೆಗಳ ಬಗ್ಗೆ  ಅರಿವು ಮೂಡಿಸುವುದು ಮತ್ತು ಸ್ಥಳದಲ್ಲೇ ಸೇವೆ ನೀಡಲು ಅಂಚೆ ಜನ ಸಂಪರ್ಕ ಅಭಿಯಾನ ತಾಲೂಕಿನ ಮೋಕಾ ಗ್ರಾಮ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಅಂಚೆ ಅಧೀಕ್ಷಕ ವಿ ಎಲ್ ಚಿತ್ತಕೋಟೆ ಅವರು, ಅಂಚೆ ಇಲಾಖೆಯು ಮೂಲ ಅಂಚೆ ಪತ್ರ ಬಟವಡೆ ಸೇವೆಗಳ ಜೊತೆ  ದೇಶದ ಪ್ರತಿಯೊಬ್ಬರಿಗೂ  ಬ್ಯಾಂಕಿಂಗ್ , ಇನ್ಶೂರೆನ್ಸ್ ಉತ್ಪನ್ನಗಳನ್ನು ತಲುಪಿಸುವ ಮತ್ತು ರಿಟೇಲ್ ಸೇವೆಯ ಕ್ಷೇತ್ರದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಪಾಸ್ಪೋರ್ಟ್ ಸೇವೆ ಗಳನ್ನು ಒದಗಿಸುವ ಮೂಲಕ ಬಹುಮುಖ ಆಯಾಮದಲ್ಲಿ ಸೇವೆ ನೀಡುತ್ತಿದೆ. 
ಅಂಚೆ ಕಚೇರಿಯಲ್ಲಿ 20 ರೂಪಾಯಿಯಲ್ಲಿ 2 ಲಕ್ಷ, 520 ರೂಪಾಯಿಗೆ 10 ಲಕ್ಷ ಸಿಗುವ ಅಪಘಾತ ಜೀವ ವಿಮೆ ಯಂತ ಕೈಗೆಟುಕುವ ವಿಮೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳನ್ನು ನೀಡುತ್ತಿದೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಹಾಯಕ ಅಂಚೆ ಅಧೀಕ್ಷ ಪಿ.ಚಿದಾನಂದ ಅವರು, 170 ವರ್ಷಗಳ ಕಾಲ ದೇಶದ ಜನರಿಗೆ ಸುಧಿರ್ಘ ಅಂಚೆ ಸೇವೆ ನೀಡಿದ ಅಂಚೆ ಇಲಾಖೆಯು 1,60,000 ಅಂಚೆ ಕಛೇರಿಗಳ ಮೂಲಕ ದೇಶದಾದ್ಯಂತ ತನ್ನ ಜಾಲವನ್ನು ಹೊಂದಿದ್ದು ಉಳಿತಾಯ ಮನೋಭಾವನೆ ಬೆಳೆಸುವಲ್ಲಿ  ಕಾರ್ಯನಿರತವಾಗಿದೆ.  ಜೀವನದಲ್ಲಿ ಪ್ರತಿಯೊಬ್ಬರೂ ಮುಂದಾಲೋಚನೆಯಿಂದ ಭವಿಷ್ಯತ್ತಿಗಾಗಿ ಅಂಚೆ ಇಲಾಖೆಯ ಸುರಕ್ಷಿತ, ಆಕರ್ಷಕ ವಾದ, ಜನಪ್ರೀಯ, ಜನಪಯೋಗಿ ಉಳಿತಾಯ ಹಾಗೂ ವಿಮಾ ಯೋಜನೆಗಳ ಸೇವೆ ಪಡೆಯಲು ಕೋರಿದರು.
ವಿಜಯ  ಪ್ರೌಢ ಶಾಲೆಯ ಯ ಮುಖ್ಯ ಶಿಕ್ಷಕ ಡಿ.ಎಸ್. ಜ್ಞಾನೇಶ್,  ಕಡಿಮೆದರದ ಜೀವ ವಿಮೆಗಳು, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯು ಅಂಚೆ ಕಚೇರಿಯಲ್ಲಿ ಲಭ್ಯವಿದ್ದು , ಸೇವಾ ಮನೋಭಾವದ ಅಂಚೆಕಚೇರಿ ಯ ವಿವಿಧ ಯೋಜನೆಗಳ ಲಾಭಪಡೆಯಬೇಕೆಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಹೀರಾಳ್ ಪಕ್ಕೀರಮ್ಮ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ವೆಂಕಟಮ್ಮ, ಮಲೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಪಾಧ್ಯಾಯ ಎಸ್. ಕೊಟ್ರಪ್ಪ, ಅಂಚೆ ಪಾಲಕರದ  ಬಿ ಕೆ ಮಧುಸೂಧನ್, ಪಿಎಲ್ ಐ  ಅಭಿವೃದ್ಧಿ ಅಧಿಕಾರಿ ಮಾರುತಿ, ಮೋಕಾ ವ್ಯಾಪ್ತಿಯ ಅಂಚೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಾಲಿಹಾಳ್ ಶಾಖಾ ಅಂಚೆ ಕಛೇರಿಯ ನಂದಿನಿ ನಿರೂಪಿಸಿದರು,ಗ್ರಾಮದ ಪ್ರಮುಖರಾದ ವೆಂಕಟೇಶ್ ಸ್ವಾಮಿ ಮತ್ತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.  ರಾಮಣ್ಣ ಕಾರ್ಯಕ್ರಮದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.