
ತಾಳಿಕೋಟೆ:ಮಾ.5: 12ನೇ ಶತಮಾನದ ಮಹಾನ ಧರ್ಮ ಬೆಳಗಿಸಿ ಧರ್ಮ ಉಳಿಸಿ ಮಾನವ ಕುಲಕೋಟಿಯನ್ನು ಆತ್ಮಸ್ವರೂಪಿಯನ್ನಾಗಿ ಮಾಡಿದ ಮಹಾಶಿವಯೋಗಿ ಅಲ್ಲಮನಾಗಿದ್ದು ಅದರಂತೆ ಜಗತ್ತಿನಲ್ಲಿರತ್ತಕ್ಕಂತಹ ಸಂಪತ್ತಿನ ಬುತ್ತಿಯನ್ನು ಕಟ್ಟಿ ಮಾನವ ಕುಲ ಕೋಟಿಗೆ ಕೊಡುಗೆ ನೀಡಿದವರು ಬಸವಾದಿಶರಣರಾಗಿದ್ದಾರೆಂದು ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಶನಿವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಸಾಗಿಬಂದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 12ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಜೀವನ ಪಾವನ ಉನ್ನತ ಮಟ್ಟಕ್ಕೆರಲು ಸಾರ್ಥಕತೆ ಮಾಡತ್ತಕ್ಕಂತಹದ್ದು ಪಾರಮಾರ್ಥಿಕ ಬುತ್ತಿ ಎನ್ನಲಾಗುತ್ತಿದೆ. ನೀರಡಿಕೆಯಾದಾಗ ನೀರು ಹಸಿವೆಯಾದಾಗ ಅನ್ನ ಎಂಬುದು ಅಮುಲ್ಯವಾದದ್ದಾಗಿದ್ದು ಜೀವನ ಪಾವನ ಮಾಡುವ ಪಾರಮಾರ್ಥಿಕ ಬುತ್ತಿಯನ್ನು ಕೊಟ್ಟವರು ಶರಣರು ಮಹಾತ್ಮರೆಂದರು.
ಮಾಡಿ ಮಾಡಿರತಕ್ಕಂತಹದ್ದು ನೋಡಿ ನೋಡದಂತೆ ಮಾಡಿ ಮಾಡದಂತೆ ಇರುವುದು ಈ ಸಂಸಾರದಲ್ಲಿ ಮಾಡಿ ಮಾಡದ ಹಾಗೆ ಇರುವುದು ನಿರ್ಮೊಹ ನಿರಂಕಾರವೆಂದು ಕರೆಯುತ್ತಾರೆಂದರು. ಇದಕ್ಕೆ ನಿಷಪ್ರಪಂಚ ಎನ್ನುತ್ತಾರೆ ಶರಣರು ಇದನ್ನು ಅನುಷ್ಠಾನ ಮಾಡಿದರೆಂದರು. ವಸ್ತು ಜಗತ್ತು ಇದ್ದು ಇದ್ದಾಂಗ ಇರುವುದಿಲ್ಲ ಬದಲಾಗುತ್ತದೆ ಕಾಣುವುದೆಲ್ಲ ಒಂದು ದಿನ ನಾಶವಾಗುತ್ತದೆ ಸಾವಿರ ಸಾವಿರ ವರ್ಷದ ನಂತರ ಕಟ್ಟಿದ ಮನೆಯು ಸಹ ನಷ್ಟವಾಗಿ ಹೋಗುತ್ತದೆ ಎಂದರು. ಕಾಣದಕ್ಕೆ ಜ್ಞಾನವೆಂದು ಕರೆದರು. ತುಂಬಿದ್ದು ಕಾಲಿಯಾಗುತ್ತದೆ ,ಏರಿದ್ದು ಇಳಿಯುತ್ತದೆ, ಕೂಡಿದ್ದು ಅಗಲುತ್ತದೆ ಹಾಗೆ ಈ ಶರೀರ ಕಾಲಿಯಾಗುತ್ತದೆ ದೇಹ ರಕ್ತ ಮಾಸದಿಂದ ತುಂಬಿದೆ ಯೌವನ ಅವಸ್ಥೆಯಲ್ಲಿ ತುಂಬಿರುತ್ತದೆ ಎರುತ್ತ ಹೊಗುತ್ತಾ ಮುಂದೆ ಇಳಿಯುತ್ತಾ ಹೋಗಿ ಒಂದು ದಿನ ಕಾಲಿಯಾಗುತ್ತಾನೆ ಎಂದರು. ಪರಸ್ಪರ ಅವಲಂಬಿಗಳಾದ ಸತಿ ಪತಿಗಳು ಒಂದು ದಿನ ಪತಿಹೊದನೆಂದರೇ ಸತಿ ಎನ್ನುವಂತಹದ್ದು ಮರೆಯಾಗಿ ಹೋಗುತ್ತದೆ ಸತಿ ಪತಿ ಇವರು ಪರಸ್ಪರ ಅವಲಂಬಿಗಳೆಂದ ಶ್ರೀಗಳು ಏನೂ ಉಳಿಯುತ್ತದೆ ಅಲ್ಲ ಅದುವೇ ಶೂನ್ಯ ಸಂಪಾದನೆ ದೃಶ್ಯ ಮರೆಯಾಗಿ ಏನೂ ಉಳಿಯುತ್ತದೆ ಅದು ಸತ್ಯವೆಂದರು.
ಕಣ್ಣು ಕುರುಡಾಗುತ್ತದೆ, ಕಿವಿ ಕಿವುಡಾಗುತ್ತದೆ ಅವು ನಮ್ಮವಲ್ಲ ನಮ್ಮದಲ್ಲದ್ದು ನಮ್ಮದೆಂದು ತಿಳಿದು ಕೊಂಡಿದ್ದೆ ಆದರೆ ಅದಕ್ಕೆ ಬ್ರಾಂತಿ ಅನ್ನುತ್ತಾರೆಂದರು. ಕೈ ಕಾಲುಗಳು ಹೋಗುತ್ತವೆ ಬೆನ್ನು ಬಾಗುತ್ತದೆ ಗೊತ್ತಿಲ್ಲದಂತೆ ಬದಲಾಗುತ್ತ ಸಾಗುತ್ತದೆ ಆದರೆ ಇದ್ದಂಹಗ ಇರುವುದಿಲ್ಲ ಬದಲಾಗುವುದಕ್ಕೆ ಪ್ರಪಂಚವೆಂದು ಕರೆಯುತ್ತಾರೆಂದರು. ಪರವಸ್ತು ಶರಣು ಗಳಿಸಿಕೊಂಡು ಇದು ಯಾವುದೂ ನಮ್ಮದಲ್ಲ ಅದು ಏನಿದೇ ಅದೇ ಮನುಷ್ಯನ ಬ್ರಾಂತಿಯಾಗುತ್ತದೆ ಯಾಕೆಂದರೆ ಶರೀರ ಇಂದ್ರೀಯಗಳೂ ನಂದು ಎನ್ನುವುದು ಬ್ರಾಂತಿಯಾಗಿದೆ ನನ್ನದಲ್ಲ ಎನ್ನುವುದೇ ಆತ್ಮ ಸ್ವರೂಪವೆಂದರು. ಪ್ರಪಂಚದ ವಾಸನೆಗಳೂ ಸಮುದ್ರದ ಅಲೆಗಳಂತೆ ಅದರಲ್ಲಿ ಶಾಂತವಾಗಿದ್ದೆ ಸಮುದ್ರ ಆದರೆ ಅಲೆಗಳಲ್ಲ ಎಂಬುವುದನ್ನು ಮಹಾತ್ಮರು, ಶರಣರು ಅರಿತು ಕೊಂಡಿದ್ದರೆಂದು ಹೇಳಿದ ಶ್ರೀಗಳು ಮಡಿವಾಳಪ್ಪನವರ ವಚನ ಹೇಳಿ ಬಿಡಿಬಿಡಿಯಾಗಿ ಹೇಳಿದ ಅವರು ನಡುವಿನ ತೊಡಕಿದು ಸಂಸಾರವೆಂಬುದನ್ನು ಬಡಿಗೆಯಂತೆ ಅಡ್ಡಬಂದು ಕೆಡವುತ್ತದೆ ಎಂದರು ಆದರೆ ಬೀಳದಂತೆ ನೋಡಿಕೊಂಡು ಹೋಗುವುದನ್ನು ಕಲಿಸುವುದೇ ಶರಣರ ವಚನಗಳಾಗಿವೆ ಎಂದರು.
ಜಗತ್ತಿನ ಅಂಧಕಾರವನ್ನು ಅಜ್ಞಾನವನ್ನು ಕಳೆಯುವುದಕ್ಕಾಗಿ 5ಸಾವಿರ ವರ್ಷಗಳ ಹಿಂದೆ ಬುದ್ಧನಾಗಿ ಬಂದು ಬಡಿದೆಬ್ಬಿಸಿದ ಹಾಗೆ ಅಲ್ಲಮಪ್ರಭು ಬಡಿದೆಬ್ಬಿಸಿ ಅಜ್ಞಾನವನ್ನು ಕಳೆದು ಧರ್ಮವನ್ನು ತಿಳಿಸಿ ಪಾದಚಾರಿಯಾಗಿ ಸಂಚಾರ ಮಾಡುತ್ತ ಗದುಗಿನ ಮಾರ್ಗವಾಗಿ ಹೋಗುತ್ತಾನೆ ಅಲ್ಲಿ ಲಕ್ಕುಂಡಿ ಎಂಬ ಶೇಷ್ಠ ನಿಸರ್ಗದಿಂದ ಕೂಡಿದ ಧರ್ಮವಂತ ಗ್ರಾಮ ಇದಾಗಿತ್ತು. ಅಲ್ಲಿ ಶರಣ ದಂಪತಿಗಳಿಗೆ ಅವಳಿ ಜವಳಿ ಒಂದು ಗಂಡು ಒಂದು ಹೆಣ್ಣು ಮಗುವಾಗಿದ್ದವು ಆದರೆ ಜನ್ಮ ನೀಡಿದ ತಂದೆ ತಾಯಿ ಮಕ್ಕಳು ಚಿಕ್ಕವರಿದ್ದಾಗಲೇ ತೀರಿ ಹೋಗುತ್ತಾರೆ ಅದೇ ಗ್ರಾಮದ ಒಬ್ಬ ಮಹಿಳೆಗೆ ಮಕ್ಕಳಿರಲಿಲ್ಲ ಆಕೆ ಓಡಿಬಂದು ಈ ಎರಡು ಮಕ್ಕಳಿಗೆ ಮಾತೃ ಹೃದಯ ತೋರಿ ದೇವಿಸ್ವರೂಪ ಮಕ್ಕಳೆತ್ತಿಕೋಡಾಗ ಆಕೆಯ ಎದೆಹಾಲನ್ನು ಭಗವಂತನು ಕೊಟ್ಟುಬಿಟ್ಟ ನೋಡಿದವರು ಕೇಳಿದವರು ಭಗವಂತನ ಲೀಲೆ ಹೇಗಿದೆ ನೋಡಿ ಎಂದರು. ಆ ಮಹಿಳೆ ಮಕ್ಕಳನ್ನು ಬೆಳೆಸಿದಳು. ಅದೇ ಊರಿನ ಒಬ್ಬ ಮಹಾತ್ಮ ಬಂದು ಎರಡು ಮಕ್ಕಳಿಗೆ ಹೆಸರಿಟ್ಟ. ಹೆಣ್ಣು ಮಗಳಿಗೆ ಮುಕ್ತಾದೇವಿ ಎಂದು ಗಂಡು ಮಗುವಿಗೆ ಅಜಗಣ್ಣನೆಂದು ಹೆಸರಿಟ್ಟರು. ಈ ಮಕ್ಕಳು ಸ್ವಲ್ಪ ದೊಡ್ಡವರಾಗುವುದರೊಳಗೆ ಈ ತಾಯಿಯು ಸಹ ತಿರಿಹೋದಳು. ಅಣ್ಣ ಅಜಗಣ್ಣ ತಂಗಿಯನ್ನು ಸಾಕಲು ಅನ್ನಮಾಡಿ ಹಾಲು ಹಾಕಿ ಉಣಿಸಿ ಆಡಿಬಂದ ತಂಗಿಯ ಅಂಗಾಲು ತೊಳೆಯುತ್ತಿದ್ದ ಅಣ್ಣ ತಂಗಿಗೆ ತಾಯಿಯಾಗಿ ಗುರುವಾಗಿ ಪರಿಣಮಿಸಿದ. ದೊಡ್ವನಾದ ಅಣ್ಣ ಅಜಗಣ್ಣ ಹೊಲ ಮಾಡಿದ ತಾನೂ ದೀಕ್ಷೆ ಪಡೆದು ತಂಗಿಗೂ ದೀಕ್ಷೆಕೊಟ್ಟ ಇದನ್ನು ಅರಿತ ತಂಗಿ ಅಣ್ಣಗುರುವೆಂದು ತಿಳಿದು ಗುರು ಶಿಷ್ಯರಾಗಿ ಮುಂದುವರೆದರು.
ಮುಕ್ತಾದೇವಿಯ ವಿಚಾರ ಒಳ್ಳೆಯದಾಗಿತ್ತು ಅನ್ಯರಿಗಾಗುತ್ತಿರುವ ದುಖಃವನ್ನು ಹಂಚಿಕೊಂಡು ಪ್ರೀತಿಯ ಮಾತನ್ನು ಹೇಳಿ ಸುಖ ದುಖಃದಲ್ಲಿ ಪಾಲ್ಗೋಳ್ಳುತ್ತಿದ್ದಳು. ತಂಗಿ ದೊಡ್ಡವಳಾದರೂ ಆಕೆ ಉಂಡಮೇಲೆ ಆಕೆಯ ಬಾಯಿ ಒರೆಸುತ್ತಿದ್ದ ಅಣ್ಣ ಅಜಗಣ್ಣ. ತಂಗಿ 16ನೇ ವರ್ಷಕ್ಕೆ ಬಂದಾಗ ಆಕೆಗೆ ಒಳ್ಳೆಯ ವರ ನೋಡಿ ಲಗ್ನಮಾಡಲು ಮುಂದಾದ ಅಣ್ಣ ಆತನ ವಿಚಾರ ಕೇಳಿ ತಂಗಿ ಅಣ್ಣ ನಾನೂ ನಿನ್ನ ಬಿಟ್ಟು ಇರುವುದಿಲ್ಲ ನೀ ಇರುವ ತನಕ ನಿನ್ನ ಸೇವೆ ಮಾಡುತ್ತೆನೆಂದಾಗ ನನ್ನನ್ನು ಗುರುವೆಂದು ನಂಬಿದ ನೀನು ನನ್ನ ಅಪ್ಪಣೆ ಪಾಲಿಸು ತಂಗಿ ಎಂದು ಅಣ್ಣ ಮಾತಿನಲ್ಲಿಯೇ ಹಿಡಿದು ಹಾಕಿದ. ಇದಕ್ಕೆ ತಂಗಿ ಒಪ್ಪಿದಾಗ ಅಣ್ಣ ಅಜಗಣ್ಣ ಗದಗ ಜಿಲ್ಲೆಯಿಂದ ದೇವದುರ್ಗ ತಾಲೂಕಿಗೆ ಬಂದು ಮಸರಕಲ್ಲ ಗ್ರಾಮಕ್ಕೆ ಬಂದ ತನಗೆ ಪರಮಾತ್ಮ ತೊರಿಸಿದ ದಾರಿಯಂತೆ ಅಲ್ಲಿ ಶ್ರೇಷ್ಠವರವಿದ್ದ ಮನೆಗೆ ಹೋಗಿ ತಂಗಿಯ ವಿಚಾರ ಹೇಳಿ ನಮಸ್ಕರಿಸಿದಾಗ ಆ ವರನ ತಂದೆ ಹಾಗೂ ವರ ಇತನ ಒಳ್ಳೆ ಸಂಸ್ಕಾರ ನೋಡಿ ಯೋಗ್ಯ ಕನ್ನೆ ದೊರೆತಳಲ್ಲ ಎಂಬ ಹರ್ಷ ವ್ಯಕ್ತಪಡಿಸುತ್ತಾರೆ.ನಂತರ ಅಣ್ಣ ಮಾತುಕತೆ ಮುಗಿಸಿ ಇತ್ತ ತಂಗಿಯ ಹತ್ತಿರ ಬಂದು ನಿನ್ನ ವಿವಾಹ ಕುರಿತು ವರನನ್ನು ನೋಡಿ ಬಂದಿದ್ದೆನೆ ಎಂದಾಗ ತಂಗಿ ಮುಕ್ತಾದೇವಿ ಅಣ್ಣನ ಕಾಲಿಗೆ ನಮಸ್ಕರಿಸಿ ನೀನು ದಾರೆಯರದ ಸ್ಥಾನಕ್ಕೆ ಹೊಗುತ್ತೆನೆನ್ನುತ್ತಾಳೆ ಭಾವದಲ್ಲಿ ಭಾಗ್ಯವಿದೆ ಅಣ್ಣನ ಮೇಲೆ ಶ್ರದ್ಧೆ ಇಟ್ಟ ತಂಗಿ ಆತನ ಮಾತಿಗೆ ಒಪ್ಪಿಗೆ ಕೊಡುತ್ತಾಳಲ್ಲದೇ ತಂದೆ ತಾಯಿಯಾಗಿ ಸಲುಹಿದ ಅಣ್ಣನನ್ನು ಹೇಗೆ ಬಿಟ್ಟು ಹೋಗಲೆಂದು ದುಖಃ ಪಡುತ್ತಾಳೆ ತಂಗಿ ಎಂದು ಶ್ರೀಗಳು ಪ್ರವಚನ ಮುಂದುವರೆಸಿದರು.
ಇದೇ ಸಮಯದಲ್ಲಿ ವರವಿಯ ಹಣಮಂತರಾಯಗೌಡ ಮಾಲಿಪಾಟೀಲವರು 16ಎಕರೆ ಜಮೀನನ್ನು ಶ್ರೀ ಮಠಕ್ಕೆ ದಾನ ಮಾಡಿದ್ದರಿಂದ ಶ್ರೀ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.