ಮೊಹ್ಮದ ರಫಿ ಪುಣ್ಯಸ್ಮರಣೆ: ಸಂಗೀತ ಕಾರ್ಯಕ್ರಮ

ಕಲಬುರಗಿ,ಆ.1- ಎಂ.ಜಿ.ಗನತೆಎ ಅವರ ನೇತೃತ್ವದಲ್ಲಿ ಮೆಲೋಡಿ ಮುಜಿಸಿನ್ ತಂಡದಿಂದ ಆಯೋಜಿಸಿದ್ದ ಮೊಹಮ್ಮದ್ ರಫಿ ಅವರ 43ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ಕನ್ನಡ ಭವನದ ಆವಣದಲ್ಲಿ ಆಯೋಜಿಸಲಾದ ಖ್ಯಾತ ಹಿನ್ನೆಲೆಯ ಗಾಯಕ ಮೊಹಮ್ಮದ್ ರಫಿ ಅವರಿಗೆ ಸಂಗೀತ ಪ್ರೇಮಿಗಳು ಶ್ರದ್ಧಾಂಜಲಿ ಅರ್ಪಿಸಿದರು.
ಇದೇ ಸಮಯದಲ್ಲಿ ಮೊಹಮ್ಮದ್ ರಫಿ ಅವರ ಭಾವಚಿತ್ರಕ್ಕೆ ಹೋಮಾಲಿ ಹಾಕಿ ಪುಷ್ಪಾರ್ಚನೆ ಮಾಡಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮಾಲಾಶ್ರೀ, ಅಶ್ವಿನಿ, ಪ್ರಮೋದ್ ಪಟುವಾರೆ, ಪ್ರಿಯಾಂಕ, ನಿಲ್ಲಿಮಾ, ಶಶಿರೇಖಾ, ವಾಲ್ಮೀಕಿ ವಿ. ಕಾಂಬಲ್, ವಿಟ್ಟಲ್ ಮೇತ್ರಿ, ಡಾ.ಕೊಟ್ಟಾರೆ ಅನೇಕ ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು.