ಮೊಹ್ಮದ ನಲಪಾಡ್ ಹೇಳಿಕೆಗೆ ಖಂಡನೆ

ಕಲಬುರಗಿ:ಸೆ.23: ದೇಶದ ಯುವಕರು ಐಸಿಸ್ ನಂತಹ ಉಗ್ರ ಸಂಘಟನೆ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹ್ಮದ ನಲಪಾಡ್ ಹೇಳಿಕೆ ಅಕ್ಷಮ್ಯ ಅಪರಾದವಾಗಿದೆ ಎಂದು ಬಿಜೆಪಿ ಮುಖಂಡ ಗುಂಡು ಟಿ ಮತ್ತಿಮೂಡ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ.ಪ್ರಸ್ತುತ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಆರಂಭಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ಜೊತೆ ದೇಶಪ್ರೇಮ ಸೃಷ್ಟಿಸುತ್ತಿದೆ. ದೇಶದ ಯುವಕರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದರಿಂದ ದೇಶದ ಯುವ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದರು.ಇಂತಹ ಕಾಂಗ್ರೆಸ್ ಮುಖಂಡರಿಂದ ದೇಶದ ಹಿತ ಚಿಂತನೆ ಹಾಗೂ ಭಾರತ ಜೋಡಣೆ ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.