ಮೊಹಿನುದ್ದಿನ್ ಪೀರ್ ಜಾದೆ ಸಾಧನೆ ಅಪಾರ

ರಾಯಚೂರು,ನ.೭-ಅಲ್ಪಸಂಖ್ಯಾತರ ಶಾಲೆಯಲ್ಲಿ ಕನ್ನಡ ಶಾಲೆಗಳಿಗೆ ಪೈಪೋಟಿಯನ್ನು ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರು ಮಕ್ಕಳಿಗೆ ಕನ್ನಡವನ್ನು ಬೋಧನೆಯನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ನಗರ ಸಭೆ ಸದಸ್ಯ ಜಯಣ್ಣ ಹೇಳಿದರು.
ಅವರಿಂದು ನಗರದ ಟ್ಯಾಗೋರ್ ಕಾಲೇಜು ಸಭಾಂಗಣದಲ್ಲಿ ಯುವ ಲೇಖಕ ಈರಣ್ಣ ಬೆಂಗಾಲಿ ಅವರ ನಿವೃತ್ತ ಕನ್ನಡ ಶಿಕ್ಷಕ ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರ ಸಾಧನೆ ಕುರಿತು ಅಪರೂಪದ ಕನ್ನಡ ಮೇಷ್ಟ್ರು ಕೃತಿ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರು ಅದ್ಬುತವಾದ ಶೈಲಿಯನ್ನು ಮೈಗೂಡಿಸಿಕೊಂಡಿದ್ದರು. ಇವರ ಸಾಧನೆ ಅಪಾರವಾದದ್ದು,ಉರ್ದು ಪ್ರಭಾವದಿಂದ ಬಂದಿರುವ ಇವರು ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕನ್ನಡವನ್ನು ಬೋಧನೆ ಮಾಡಿದ್ದು ಸಂತಸ ತಂದಿದೆ ಎಂದರು.ನಾವು ಕನ್ನಡಿಗರು, ನಮ್ಮ ಕನ್ನಡ ಶಾಲೆ,ಅನ್ನುವವರು ತುಸು ಆಲೋಚನೆ ಮಾಡುವಂತ ಕಡೆಗೆ ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರು ವಹಿದಿದ್ದಾರೆ.ಭಾಷೆ ಪರಿಸರದಿಂದ ಬರೋದಿಲ್ಲ.ಭಾಷೆ ಬರಬೇಕಾದರೆ ಸಾಧನೆ ಅತಿ ಮುಖ್ಯ ಎಂದರು.
ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರು ಶಿಕ್ಷಣ ಇಲಾಖೆಗೆ ಒಂದು ಆಸ್ತಿ ಇಂತ ಶಬ್ದ ಬರಬೇಕಾದರೆ ಸಾಕಷ್ಟು ಸಾಧನೆ ಮಾಡಿದರೆ ಮಾತ್ರ ಬರುತ್ತೆ ಅಂತ ಸಾಧನೆಯನ್ನು ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರು ಮಾಡಿದ್ದಾರೆ.ಇವರ ಸಾಧನೆಯನ್ನು ಬೆಳಕಿಗೆ ತರುವಂತೆ ಕೆಲಸವನ್ನು ಈರಣ್ಣ ಬೆಂಗಾಲಿ ಅವರು ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ತಿಸಿದರು.ಸೈಯದ್ ಗೌಸ್ ಮೊಹಿನುದ್ದಿನ್ ಪೀರ್ ಜಾದೆ ಅವರಂತ ಸಾಕಷ್ಟು ಜನರು ಸಾಧನೆಯನ್ನು ಮಾಡಿದ್ದಾರೆ.ಈರಣ್ಣ ಬೆಂಗಾಲಿ ಯಂತಹ ಸಾಹಿತಿಗಳು ಬೆಳಕಿಗೆ ತರುವ ಕೆಲಸ ಮಾಡಬೇಕಿದೆ ಎಂದರು.
ಇದೆ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನಲೆ ಅವರಿಗೆ ಒಂದು ನಿಮಿಷದ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮ್ಯಾದರ್ ಲಲಿತಾ ಕಲಾ ಪ್ರತಿಷ್ಠಾನದ ಅದ್ಯಕ್ಷ ಎಚ್.ಎಸ್.ಮ್ಯಾದರ್, ನ್ಯಾಯವಾದಿ ಶರತ್ ಕಳಸ, ನಯಾ ಮದರ್ಸ್ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯ ಗುರು ಎಂ.ಡಿ. ಅಬ್ದುಲ್ ಲತೀಫ್, ನಿವೃತ್ತ ಶಿಕ್ಷಕ ಸೈಯ ದ್ ಗೌಸ್ ಮೊಹಿನುದ್ದಿನ್, ಪೀರ್ ಜಾದೆ, ಸಾಹಿತಿ ವೀರ ಹನುಮಾನ್, ಮ್ಯಾದರ್ ಲಲಿತ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ರಾಮಣ್ಣ ಮ್ಯಾದರ್, ಕೃತಿಕಾರ ಈರಣ್ಣ ಬೆಂಗಾಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.