ಮೊಹರಂ ಹಬ್ಬ ಹಿಂದೂ ಮುಸ್ಲಿಂರ  ಬಾಂಧವ್ಯ ಬೆಸೆಯುವ ಹಬ್ಬ -ರಶೀದ್ ಹಣಜಗೇರಿ


ಸಂಜೆವಾಣಿ ವಾರ್ತೆ
ಕುಕನೂರು,ಜು,24- ಮೊಹರಂ ಹಬ್ಬ ಹಿಂದೂ ಮುಸ್ಲಿಂ ರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಅದನ್ನು ಶಾಂತಿಯುತವಾಗಿ ಆಚರಣೆ ಮಾಡಲು ಯುವಕರು ಮುಂದಾಗೋಣ ಎಂದು ಮುಖಂಡ ರಶೀದ್ ಹಣಜಗೇರಿ ಹೇಳಿದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊಹರಂ ಎಂಬ ಹಬ್ಬವೂ ಹಿಂದೂ ಮುಸ್ಲಿಂ ಬಾಂಧವ್ಯಗಳನ್ನು ಬೆಸೆಯುವ ದೋಡ್ಡ ಹಬ್ಬವಾಗಿದೆ ಇಂತಹ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಮತ್ತು ಸರ್ಕಾರದ ಆದೇಶನ್ವಯ ಆಚರಣೆ ಮಾಡಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.  ಪತ್ರಕರ್ತ  ರುದ್ರಪ್ಪ ಭಂಡಾರಿ ಸಾಂದಭಿ೯ಕ ಮಾತನಾಡಿದರು.
 ತನಿಖಾ ವಿಭಾಗದ ಪಿಎಸ್ಐ ಕಾಶಿನಾಥ್ ಮಾತನಾಡಿ,  ಹಬ್ಬವು ಜು.,೨೮,೨೯, ರಂದು ನಡೆಯಲಿದೆ ಮೊಹರಂ ಹಬ್ಬಕ್ಕೆ ಗ್ರಾಮೀಣ ಮತ್ತು ಪಟ್ಟಣದಲ್ಲಿ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಲ್ಲರೂ ಒಗ್ಗೂಡಿ ಮೊಹರಂ ಆಚರಣೆ ನಡೆಸಬೇಕು. ಹಿಂದು-ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬವೇ ಮೊಹರಂ ಆಗಿದೆ. ಎಂದು ಹೇಳಿದರು
ಈ ಸಂದರ್ಭದಲ್ಲಿ, ಪೋಲಿಸ್ ಸಿಬ್ಬಂದಿಗಳಾದ ಮಾರುತಿ, ಮಂಜುನಾಥ್,  ಎ.ಎಸ್.ಐ ನಿರಂಜನ್ , ಮುಖಂಡರಾದ ಅಂಜುಮನ್ ಕಮಿಟಿ ಅಧ್ಯಕ್ಷ ರಶೀದ್ ಮುಬಾರಕ್,   ಮೇಘ ರಾಜ್ ಬಳಗೇರಿ , ವಿರಾಪಕ್ಷಯ್ಯ  ಕುತ್ಹ೯ಕೊಟಿ,, ಕೆಂಚಪ್ಪ ನಡುಲ ಮನಿ, ಯಮನೂರಪ್ಪ ಕಟ್ಟಿಮನಿ, ರಾಜಶೇಖರ್, ವಿನಾಯಕ ಸರ್ರ ಗಣಾಚಾರಿ, ಶಶಿ ಭಜೇಂತ್ರಿ ಹಾಗೂ ಇತರ ಇದ್ದರು