ಮೊಹರಂ ಹಬ್ಬ ಅಂಗವಾಗಿ ಶಾಂತಿ ಸಭೆ

ಕವಿತಾಳ.ಆ.೦೧- ಇಂದು ಕವಿತಾಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬ ನಿಮಿತ್ತ ಶಾಂತಿ ಸಭೆ ಕರಿಯಲಾಗಿತ್ತು ಸಭೆಯನ್ನು ಉದ್ದೇಶಿಸಿ ಪಿಎಸ್‌ಐ ಸದ್ದಾಮ್ ಹುಸೇನ್ ರವರು ಮಾತನಾಡಿ ಮೊಹರಂ ಹಬ್ಬ ಇಂದು ಮುಸ್ಲಿಮರ ಭಾವೈಕ್ಯತೆ ಹೊಂದಿದ ಹಬ್ಬ ಈ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಮಾಡಿ ಸರ್ಕ್ಯುಲರ್ ಕಳಿಸಿದ್ದು ಹಬ್ಬದಲ್ಲಿ ಯಾರು ಅಲಿಗೆ ಬಾರಿಸುವಂತಿಲ್ಲ ಅಲಾಯಿ ಕುಣಿಯುವಂತಿಲ್ಲ ಒಂದು ವೇಳೆ ಎಸ್ಪಿ ಸಾಹೇಬರ ಅ ಆದೇಶ ಮೀರಿ ನಡೆದರೆ ಅಂತವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದಕ್ಕೆ ಸಾರ್ವಜನಿಕರು ತಮ್ಮ ತಮ್ಮ ಮಸೂದೆಯ ಸಮುದಾಯದ ಹಿರಿಯರು ಯಾವುದೇ ಹೈಹಿತಕರ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕು ಯಾಕಂದರೆ ಈ ಹಿಂದೆ ಕೆಲವು ಗ್ರಾಮಗಳಲ್ಲಿ ನಡೆದ ಹಹಿತಕರ ಘಟನೆಗೆ ಒಳಗಾದ ಕೆಲವು ಊರುಗಳು ನಮ್ಮ ಠಾಣಾ ವ್ಯಾಪ್ತಿಗೆ ಬರುವ ಕವಿತಾಳ್ ಬಾಗಲ್ವಾಡ ಹಾಗೂ ಹಿರೇಬಾದರದಿನ್ನಿಯಲ್ಲಿ ಈ ಮೂರು ಗ್ರಾಮಗಳಲ್ಲಿ ಕಾನೂನು ವ್ಯವಸ್ಥೆ ಕಾಪಾಡಲು ದಿನಾಂಕ-೧ ರಿಂದ ೯-ರವರೆಗೆ ಆಚರಿಸುವ ಮೊಹರಂ ಹಬ್ಬವನ್ನು ಸಾರ್ವಜನಿಕರು ಗುಂಪು ಗುಂಪಾಗಿ ಆಚರಿಸುವುದು ಮತ್ತು ಮೆರವಣಿಗೆ ನಡೆಸುವುದು ನಿಷೇಧಿಸಿದೆ ಪ್ರತಿ ಊರುಗಳಲ್ಲಿನ ಮಸೂದೆಯ ಸಮುದಾಯದವರು ಸರಳವಾಗಿ ಪೂಜೆ ವಿಧಾನಗಳನ್ನು ಮಾಡಿಕೊಳ್ಳಬೇಕು ಒಂದು ವೇಳೆ ಆದೇಶ ಮೀರಿ ನಡೆದುಕೊಂಡು ಹಠ ಹಿಡಿದು ನಡೆದುಕೊಂಡು ಅಲೈಕುಣಿ ತೆಗೆದು ಬೆಂಕಿ ಹಾಕಿ ಹೆಜ್ಜೆ ಕುಣಿತ ಮೆರವಣಿಗೆ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.
ಶಾಂತಿ ಸಭೆಗೆ ಬಂದ ವಾಲ್ಮೀಕಿ ಮುಖಂಡ ಭೀಮಣ್ಣ ಕಾಚಾಪುರ್ ಬಿ ಹೆಡ್ ರಾಮಣ್ಣ ಮಾತನಾಡಿ ನಮ್ಮ ಭಾಗದಲ್ಲಿ ಯಾವುದೇ ಗಲಾಟೆ ಗೆಲಬೆಗಳು ನಡೆಯುವುದಕ್ಕೆ ಆಸ್ಪದ ಕೊಡುವುದಿಲ್ಲ ಇದು ಹಿಂದೂ ಮುಸ್ಲಿಮರ ದೊಡ್ಡ ಹಬ್ಬ ಸಾವಿರಾರು ಜನರು ಅರಿಕೆ ಒತ್ತುಕೊಂಡು ಅಲೈಕುಣಿ ಸುತ್ತಾ ಉರುಳಿಸಿ ದೇವರಿಗೆ ಹರಕೆ ಮಾಡಿಕೊಂಡು ಪೂಜೆ ಮಾಡುತ್ತಿರುವುದು ಬಹು ಕಾಲದ ಸಂಪ್ರದಾಯವಾಗಿದ್ದು ಇದಕ್ಕೆ ಸರ್ಕಾರ ಕಟ್ಟು ನಿಟ್ಟಿನ ಆದೇಶವನ್ನು ಜನರ ಮೇಲೆ ಹಾಕಬೇಡಿ ನಿಮ್ಮ ದಯದಿಂದ ಹಬ್ಬವನ್ನು ಆಚರಿಸುವುದಕ್ಕೆ ಸಹಕಾರ ಮಾಡಿಕೊಡಿರಿ ಎಂದು ಸ್ಥಳೀಯ ಠಾಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ನಂತರ ಠಾಣಾ ಅಧಿಕಾರಿಗಳು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಹಕಾರ ನೀಡುವುದಾಗಿ ಎಂದು ಪಿಎಸ್‌ಐ ಸದ್ದಾಮ್ ಹುಸೇನ್ ಹೇಳಿದರು.