ಮೊಹರಂ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಿ: ಸಿಪಿಐ ಮಂಜಣ್ಣ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಆ.06: ಕೊರೋನಾ ರೋಗ ಸಂಪೂರ್ಣ ನಿಯಂತ್ರಣ ಹೊಂದಿಲ್ಲ, ರೋಗದ ಮುನ್ನೆಚ್ಚರಿಕೆ ಕ್ರಮಗಳನ್ನು ಉಲ್ಲಂಘನೆ ಮಾಡದೇ ಮಾಸ್ಕ್ ಕಡ್ಡಾಯವಾಗಿ ಧರಿಸಿ ಹಬ್ಬವನ್ನು ಆಚರಿಸಿ ಎಂದು ಹ.ಬೊ.ಹಳ್ಳಿಯ ಸಿಪಿಐ ಮಂಜಣ್ಣ ಸಲಹೆ ಮಾಡಿದರು.
ಅವರು ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಮೊಹರಂ ಹಬ್ಬದ ಶಾಂತಿ ಸಭೆಯನ್ನುದ್ಧೇಶಿಸಿ ಮಾತನಾಡಿದರು.
ದೇವರ ದರ್ಶನಕ್ಕೆ ಮಹಿಳೆ ಮಕ್ಕಳಿಗೆ ಸರಿಯಾಗಿ ಅವಕಾಶ ಮಾಡಿಕೊಡಿ,
ಮಳೆ ಬರುವ ಸಂದರ್ಭ ಇರುವುದರಿಂದ ಬೆಂಕಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕುರಿತು ಎಚ್ಚರಿಕೆ ವಹಿಸಿ. ಮಳೆ ಇರುವುದರಿಂದ ಹಬ್ಬದ ಸಮಯದಲ್ಲಿ ಎಲೆಕ್ಟ್ರಿಕ್ ಕೇಬಲ್‌ಗಳ ಪರಿಶೀಲಿಸುವುದರ ಜೊತೆಗೆ ಸೂಕ್ತ ಎಚ್ಚರಿಕೆವಹಿಸಿ ಎಂದರು.
ಹಬ್ಬದ ಸಮಯದಲ್ಲಿ ಕುಡುಕರು ಮತ್ತು ತೊಂದರೆ ಕೊಡುವವರ ಕುರಿತು ನಮ್ಮ ಗಮನಕ್ಕೆ ತನ್ನಿ ಇಲ್ಲವೇ 112 ಗೆ ಕರೆ ಮಾಡಿ ತಿಳಿಸಿ. ಧಾರ್ಮಿಕವಾಗಿ ಹಿಯಾಳುಸುವಿಕೆ ಅಥವಾ ಬೇಧ ಭಾವದ ಭಾವನೆಯಿಂದ ಹಬ್ಬವನ್ನು ಆಚರಣೆ ಮಾಡಬೇಡಿ. ಪ್ರಸ್ತುತ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗದಿರಲಿ. ಆದಕಾರಣ ಎಲ್ಲರೂ ಒಗ್ಗಟ್ಟಾಗಿ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಿರಿ ಎಂದು ಸಲಹೆ ಮಾಡಿದರು.
ಎರಡು ವರ್ಷದಿಂದ ಹಬ್ಬದ ಆಚರಣೆಗೆ ಅವಕಾಶ ಇರಲಿಲ್ಲ ಈ ಬಾರಿ ಇರುವ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳದೇ ಸಂತೋಷವಾಗಿ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಆಚರಿಸಿ.‌ ಏನೇ ತೊಂದರೆಗಳಿದ್ದರೂ ನಮಗೆ ತಿಳಿಸಿ. ಅಲ್ಲದೇ
ಹೊಸ ಸ್ಥಳಗಳಲ್ಲಿ ದೇವರನ್ನು ಕೂರಿಸಲು ಅವಕಾಶವಿರುವುದಿಲ್ಲ. ಈಗಿರುವ ಸ್ಥಳಗಳಲ್ಲಿಯೇ ಆಚರಿಸಬೇಕು. ಹಾಗೇನಾದರೂ ಇದ್ದರೆ ನಮ್ಮ ಗಮನಕ್ಕೆ ತಂದು‌ ಪರವಾನಿಗೆ ಪಡೆಯಿರಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುತಾವಲಿ ಬುಡೇನ್ ಸಾಬ್, ತಾ. ಪಂ.ಮಾಜಿ ಅಧ್ಯಕ್ಷ ಓಬಪ್ಪ, ಮುತ್ತಾವಲಿ ಫಕೃ ಸಾಬ್, ತಾ.ಪಂ.ಮಾಜಿ ಸದಸ್ಯ ಬಿ.ಎಸ್ ರಾಜಪ್ಪ, ನಾಗಲಾಪುರ ಗ್ರಾ.ಪಂ. ಅಧ್ಯಕ್ಷ ಜಾತಪ್ಪ, ಪ.ಪಂ ಸದಸ್ಯ ಕೆ ಮಂಜುನಾಥ್, ನಜೀರ್ ಸಾಬ್, ಗುಂಡಾ ವೀರಣ್ಣ, ಬಣಕಾ‌ರ್ ಬಸವರಾಜ್, ಡಿ.ಎನ್.ಕೆರೆ ನಾಗಪ್ಪ, ಹಳ್ಳಿ ನಿಂಗಪ್ಪ, ಹರಿಶ್ಚಂದ್ರ ನಾಯ್ಕ, ಶರಣಪ್ಪ, ಗೊಲ್ಲರಹಳ್ಳಿ ಮಹಾಂತೇಶ್, ಎ. ರೆಹಮಾನ್, ಬಿ. ರಾಘವೇಂದ್ರ, ರೇವಣ್ಣ, ಡಣಾಪುರ ಮಂಜಯ್ಯ ಸ್ವಾಮಿ ಹಾಗೂ ಇತರರು ಇದ್ದರು.