ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ 

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜು.೨೩. :- ಪಟ್ಟಣದಲ್ಲಿ ಇಲ್ಲಿಯವರೆಗೆ ಹಬ್ಬಹರಿದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ಉದಾಹರಣೆಗಳೇ ಇಲ್ಲ, ಎಲ್ಲ ಹಬ್ಬಗಳನ್ನು ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಆಚರಣೆ ಮಾಡುತ್ತ ಬಂದಿದ್ದೀರಿ, ಮೊಹರಂ ಹಬ್ಬವು ಹಿಂದೂ, ಮುಸ್ಲಿಂರ ಭಾವೈಕ್ಯತೆಯ ಸಂಕೇತದ ಹಬ್ಬವಾಗಿದೆ. ಈ ಹಬ್ಬದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು, ಎಂದು ಸಿಪಿಐ ನಾಗರಾಜ್ ಕಮ್ಮಾರ್ ಮನವಿ ಮಾಡಿದರು. ಹರಪನಹಳ್ಳಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಷಿಯಲ್ ಮೀಡಿಯಾಗಳಲ್ಲಿ ಯಾವದೇ ರೀತಿಯ ಶಾಂತಿಭಂಗವಾಗುವಂತಹ ವಾಟ್ಸಾಪ್ ಫೇಸಬುಕ್ ಗಳಲ್ಲಿ ಪೋಸ್ಟುಗಳನ್ನುಹರಿ ಬಿಡಬಾರದು ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾಪಾಡಬೇಕು ಎಂದರು.ಈ ಸಂದರ್ಭದಲ್ಲಿ ಪಿಎಸ್ ಐ ಶಾಂತ್ ಮೂರ್ತಿ, ಎ ಎಸ್ ಐ ವಸಂತಪ್ಪ, ರುದ್ರಪ್ಪ, ಅಜ್ಜಪ್ಪ, ಹಾಗೂ ಜಗದೀಶ್,ಹಿರಿಯ ವಕೀಲರದ ಅಜ್ಜಪ್ಪ. ಹಾಗೂ ಪುರಸಭೆ ಸದಸ್ಯರುಗಳಾದ ಎಂ ವಿ ಅಂಜಿನಪ್ಪ, ಹಾಗೂ ಜಿ ನಾಗರಾಜ್, ಜಾವಿದ್, ಪೈಲವನ್ ಗಣೇಶ್, ಮುಖಂಡರುಗಳಾದ ಖಾಜಿ ಮುಸ್ತಫ್ ಸಬ್, ರಾಘವೇಂದ್ರ ಶೆಟ್ಟಿ, ಸಂತೋಷ್, ಹುಲಿಕಟ್ಟಿ ಚಂದ್ರಪ್ಪ, ಮುಂತಾದವರು ಉಪಸ್ಥಿತರಿದ್ದರು