ಮೊಹರಂ ಹಬ್ಬದ ಹಿನ್ನೆಲೆ ಪೂರ್ವ ಸಭೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.20: ಇದೇ 29 ರಂದು ನಡೆಯಲಿರುವ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪೂರ್ವ ಸಭೆ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಿಪಿಐ ವೆಂಕಟೇಶ್ ನೇತೃತ್ವದಲ್ಲಿ ಪೂರ್ವ ಸಭೆ ಹಮ್ಮಿಕೊಳ್ಳಲಾಯಿತು.
ನಂತರ  ಸಿಪಿಐ ವೆಂಕಟೇಶ್ ಮಾತನಾಡಿ ಹಿಂದೂ, ಮುಸ್ಲಿಂರ ಭಾವೈಕ್ಯತೆಯ ಸಂಕೇತದ ಹಬ್ಬ ಮೊಹರಂ ಹಬ್ಬವಾಗಿದೆ. ಈ ಹಬ್ಬದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಶಾಂತಿಯುತವಾಗಿ ಆಚರಣೆ ಮಾಡಬೇಕು,  ಕೆಂಡ ಹಾಯುವುದಕ್ಕೆ ಕಾನೂನಿನಲ್ಲಿ ಯಾವುದೇ ಅನುಮತಿ ಇಲ್ಲ, ಈ ಹಬ್ಬದ ನಿಮಿತ್ತ ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಒಂದು ಕೆಎಸ್ಆರ್ಪಿ ಅವಶ್ಯಕತೆ ಇದೆ ಇದನ್ನು ಕರೆ ತರಲಾಗುವುದು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಪಿಎಸ್ಐ ವಿಜಯ ಕೃಷ್ಣ ತೋಟದ ರಾಮಣ್ಣ, ತೆಗ್ಗಿನಕೆರೆ ಕೊಟ್ರೇಶ್, ರಾಜವಾಲಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು

One attachment • Scanned by Gmail

ReplyForward