ಮೊಹರಂ ಹಬ್ಬದ ಶಾಂತಿಪಾಲನಾ ಸಭೆ

(ಸಂಜೆವಾಣಿ ವಾರ್ತೆ)
ಗುಳೇದಗುಡ್ಡ ಜು.25: ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರೊಂದಿಗೆ ಮೊಹರಂ ಹಬ್ಬವನ್ನು ಹಿಂದುಗಳು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಮೊಹರಂ ಹಬ್ಬದ ಆಚರಣೆಯಲ್ಲಿ ಯಾವುದೇ ಸಮಸ್ಯೆ, ತೊಂದರೆ ಆಗದಂತೆ ಪೆÇಲೀಸರೊಂದಿಗೆ ಸಹಕರಿಸಿ ಮೊಹರಂ ಆಚರಿಸಬೇಕು ಎಂದು ಪಿಎಸ್‍ಐ ಲಕ್ಷ್ಮಣ ಆರಿ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿ, ಮೊಹರಂ ಹಬ್ಬ ಬಹಳಷ್ಟು ವಿಶಿಷ್ಟವಾಗಿರುವಂತಹ ಹಬ್ಬ. ಈ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ಮೊದಲು ಜರುಗುವ ಗಂಧ ಮತ್ತು ಕತ್ತಲ ರಾತ್ರಿ ಕಾರ್ಯಕ್ರಮ ಕೂಡ ಬಹಳಷ್ಟು ಶಾಂತ ರೀತಿಯಿಂದ ಆಚರಿಸಬೇಕು. ಪಟ್ಟಣ ಒಳಗೊಂಡು ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಹಿಂದು, ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದತೆಯಿಂದ ಆಚರಿಸಿ ಹಬ್ಬಕ್ಕೆ ಕಳೆ ತರಬೇಕು ಎಂದು ಲಕ್ಷ್ಮಣ ಆರಿ ಹೇಳಿದರು.
ಶಾಂತಿ ಪಾಲನಾ ಸಭೆಯಲ್ಲಿ ಎಎಸ್‍ಐ. ಎಸ್.ಐ.ಬಿಳೆಕುದುರಿ, ಪೆÇಲೀಸ್ ಸಿಬ್ಬಂದಿಗಳಾದ ಆನಂದ ಮನ್ನಿಕಟ್ಟಿ, ಎಸ್.ಐ.ಡಂಗಿ, ಆನಂದ ಬಿಂಜವಾಡಗಿ, ಸಿ.ಎಸ್.ಕಿರಸೂರು, ಸಂಗಮೇಶ ಮರೋಳ ಮತ್ತು ಮುಖಂಡರಾದ ಎಂ.ಆರ್.ಮಕಾನದಾರ, ಜಮೀರ್ ಮೌಲ್ವಿ, ಶಿವಾನಂದ ಇಟಗಿ, ಬಸವರಾಜ ಬಂಡಿವಡ್ಡರ, ಮಲ್ಲಿಕಾರ್ಜುನ ಬಾದಾಮಿಮಠ, ಮಹೇಶ್ ಹೊನ್ನಳ್ಳಿ, ಶ್ರೀಕಾಂತ್ ತಳವಾರ ಮತ್ತಿತರರಿದ್ದರು.