ಮೊಹರಂ ಹಬ್ಬದ ಮಾಸದಲ್ಲಿ: ಹಜರತ್ ಮೌಲಾಲಿ ಜಾಂಡ ಪ್ರಾಮುಖ್ಯತೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.25: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಹಜರತ್ ಖ್ವಾಜ ಸಯ್ಯದ್ ಷಾ ಮಹಮ್ಮದ್ ಅಬ್ದುಲ್ ರಜಾಕ್ ಪೀರ್ ಹಸೇನಿ ವಲ್ ಹುಸೇನಿ ಜಾಫರಿ ಚಿಸ್ತಿ ವುಲ್ಲ್ ಖಾದ್ರಿ ಆದೂನಿ ಸಾಹೇಬ್ ದರ್ಗದ ಹತ್ತಿರ ಹಜರತ್ ಅಲಿ ಮೌಲಾಲಿ ಜಾಂಡವನ್ನು ನೆರವೇರಿಸಿದರು.
 ಮೊಹರಂ ಮುಸ್ಲಿಮರಿಗೆ ಪ್ರಮುಖ ತಿಂಗಳುಗಳಲ್ಲಿ ಒಂದಾಗಿದೆ ಹಾಗೂ ಇದು ಇಸ್ಲಾಮಿಕ್ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಮೊಹರಂ ತಿಂಗಳು ಆರಂಭವಾಗುತ್ತಿದ್ದಂತೆ ಇಸ್ಲಾಮ್ ಧರ್ಮದವರಿಗೆ ಹೊಸ ವರ್ಷ ಆರಂಭವಾಗುತ್ತದೆ ಹಾಗೂ ಮೊಹರಂ ಹಬ್ಬ ಕೂಡ ಆರಂಭವಾಗುತ್ತದೆ ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತೆ.
 ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಅದ್ದರಿಂದ ಮೊಹರಂ ಆಚರಣೆ ಕಣ್ಣೀರಿನ ಹಬ್ಬವಾಗಿ ಶೋಕಾಚರಣೆಯಾಗುತ್ತದೆ ಇದೆ ಕಾರಣಕ್ಕೆ ಈ ಮೊಹರಂ ತಿಂಗಳಲ್ಲಿ ಹಜರತ್ ಮೌಲಾಲಿ ಯವರನ್ನು ನೇನೆದು ಜಾಂಡವನ್ನು ಹೇರಿಸಲಾಗುತ್ತದೆ.
 ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬವಾಗಿದ್ದು ಈ ಹಬ್ಬದಲ್ಲಿ ಹಿಂದೂಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಮೊಹರಂನ 10 ನೇ ದಿನವನ್ನು ಅಶುರಾ ಎಂದು ಕರೆಯಲಾಗುತ್ತದೆ. ಇದು ಮುಸ್ಲಿಮರಿಗೆ ಮಹತ್ವದ ದಿನವಾಗಿದೆ, ಸುನ್ನಿ ಮತ್ತು ಶಿಯಾ ಮುಸ್ಲಿಮರು ಮೊಹರಂ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅನೇಕ ಸುನ್ನಿ ಮುಸ್ಲಿಮರಿಗೆ ಈ ತಿಂಗಳು ಇಸ್ಲಾಮಿಕ್ನ ಹೊಸ ವರ್ಷದ ಆರಂಭ ಮತ್ತು ಶಾಂತಿಯ ಪ್ರತಿಬಿಂಬವಾಗಿದೆ. ಆದ್ರೆ ಇಸ್ಲಾಂನ ಶಿಯಾವನ್ನು ಅನುಸರಿಸುವ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ ಮತ್ತು ಪಶ್ಚಾತಾಪದ ದಿನವಾಗಿ ಆಚರಿಸಲಾಗುತ್ತದೆ.
‌ ಅನೇಕ ಮುಸ್ಲಿಮರು ಆಶುರಾ ದಿನದಂದು ಉಪವಾಸವನ್ನು ಮಾಡುತ್ತಾರೆ, ಹಾಗೆಯೇ ಮೊಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಗಳಲ್ಲಿ ತೊಡಗುತ್ತಾರೆ. ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ, ಈ ವೇಳೆ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ.
 ಹಜರತ್ ಸಯ್ಯದ್ ಷಾ ಚಾಂದ್ ಪೀರ್ ಸ್ವಾಮಿ, ಹಜರತ್ ಸಯ್ಯದ್ ಷಾ ಮಾಸೂಮ್ ಪೀರ್ ಹುಸೇನಿ ಕೌಡಲ್ ಪೇಟೆ ದರ್ಗದ ಹಜರತ್ ಸಯ್ಯದ್ ಷಾ ಅದೋನಿ ಮಹೇಬೂಬ್ ಪೀರ ಭಾಷ ಸಾಹೇಬ್ ಸ್ವಾಮಿ, ಶಾನಿ ಫಕರಿ ಚದರ್ ಚೌಕ್ ಚರೂ ಜಮಾಲ್ ವುಲ್ಕೆ ಸತ್ ಫಕೀರ್ ಮಂಡಳಿ, ಹಸ್ತನೆ ಅಲಿಯಾ, ಪಟ್ಟಣದ ಸರ್ವಜನಿಕರು ಇದ್ದರು.