ಮೊಹರಂ ಹಬ್ಬದ ಡೋಲಿ ಮೆರವಣಿಗೆ


ಮುನವಳ್ಳಿ,ಜು.30: ಸಮಿಪದ ಯಕ್ಕುಂಡಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಭಕ್ತಿ ಭಾವದಿಂದ ಜಾತಿ ಭೇದ ಮರೆತು ಮೊಹರಂ ಆಚರಣೆಯಲ್ಲಿ ಪಾಲ್ಗೋಂಡು ಭಾವೈಕ್ಯೆತೆ ಮೆರೆದರು.
ಮುಜಾವರ ಓಣಿಯ ಡೋಲಿ ಮತ್ತು ಪಾಂಜಾ ದೇವರು, ಜುಮ್ಮಾ ಮಸೀದಿಯ ಹತ್ತಿರವಿರುವ ದೊಡ್ಡ ಮಸೀದಿಯ ಪಾಂಜಾ ದೇವರು, ಗೊಂದಿ ಓಣಿಯ ಮಸೀದಿಯ ಡೋಲಿ ಮತ್ತು ಆಲದಕಟ್ಟಿ ಓಣಿಯ ಪಾಂಜಾ ದೇವರು ಮೆರವಣಿಗೆಯ ಮುಖಾಂತರ ಮೇನ ಮಾರ್ಕೆಟನಲ್ಲಿ ಹಾಯ್ದು ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತ ಮಠಕ್ಕೆ ಬಂದು ಅಲ್ಲಿ ಪಂಚಾಕ್ಷರ ಮಹಾಸ್ವಾಮಿಗಳು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪೊಜೆ ಸಲ್ಲಿಸಲಾಯಿತು. ಮೆರವಣಿಗೆ ಉದ್ದಕ್ಕೂ ಹಿಂದೂ -ಮುಸ್ಲಿಂ ಭಕ್ತರು ದೇವರಿಗೆ ನೀರು ಸಕ್ಕರೆ ಊದು ಸಮರ್ಪಿಸಿದರು. ದೇವರ ಕೃಪೆಗೆ ಪಾತ್ರರಾದರು. ನಂತರ ರಿವಾಯತ ಪದ ಹಾಡುವುದು, ಕರಬಲ್ ಕುಣಿತ, ಕುದರೆ ಮಜಲು, ಮಕ್ಕಳ ಲೇಜಮ್ ಆಟ, ಚಿನಕೋಲಾಟ, ಹಲಗೆ, ಭಜಂತ್ರಿಯವರ ವಾದ್ಯಮೇಳ ಹೀಗೆ ಹಲವಾರು ಕಾರ್ಯಕ್ರಮಗಳು ಜನರ ಮನರಂಜನೆಗೆ ಸಾಕ್ಷಿಯಾದವು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ಅಬ್ದುಲ್‍ಖಾದರಜೈಲಾನಿ ಬಾರಿಗಿಡದ, ಶಂಕರ ಪಾಶ್ಚಾಪೂರ, ನಿಜಾಮುದ್ದಿನ ಬಾರಿಗಿಡದ, ಫಕೀರಪ್ಪ ಪಾಶ್ಚಾಪೂರ, ಮಕ್ತುಮಸಾಬ ಬಡೇಖಾನ, ವೀರಭದ್ರಯ್ಯಾ ಮಠದ, ಬಂದೇನವಾಜ ಮುಲ್ಲಾ, ಹಸನಸಾಬ ಬಾರಿಗಿಡದ, ಸಿದ್ದಪ್ಪ ನಡುವಿನಮನಿ, ಮುಕ್ತಾರಅಹ್ಮದ ಮುಲ್ಲಾ, ಅಕ್ಬರಸಾಬ ಬಾರಿಗಿಡದ, ದಿಲಾವರಸಾಬ ಪರಸಪ್ಪನವರ, ಬಸಪ್ಪ ಕಡಕೋಳ, ಗಂಗಪ್ಪ ಪೂಜೇರ, ಮುಂತಾದ ಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು, ಸಾಯಂಕಾಲ ಡೋಲಿ ಮತ್ತು ಪಾಂಜಾದೇವರುಗಳನ್ನು ನದಿಗೆ ಕರೆದೊಯ್ಯುವ ಮೂಲಕ ಮೊಹರಂ ಹಬ್ಬ ಮುಗಿಯಿತು.