ಮೊಹರಂ ಹಬ್ಬದ ಅಂಗವಾಗಿ ಶಾಂತಿಸಭೆ


ಸಂಜೆವಾಣಿ ವಾರ್ತೆ
ಗಂಗಾವತಿ, ಜು.22: ನಗರದ ಕೃಷ್ಣದೇವರಾಯ ಕಲಾಭವನದಲ್ಲಿ ಮೊಹರಂ ಹಬ್ಬದ ಅಂಗವಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ಶುಕ್ರವಾರ ನಡೆಯಿತು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಬ್ಬಕ್ಕೆ ಸಿದ್ಧತೆ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು.
ಎಲ್ಲರೂ ಒಗ್ಗೂಡಿ ಮೊಹರಂ ಆಚರಣೆ ನಡೆಸಬೇಕು. ಹಿಂದು-ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬವೇ ಮೊಹರಂ ಆಗಿದೆ. ಗಂಗಾವತಿ ತಾಲೂಕು ಶಾಂತಿಗೆ ಹೆಸರು ವಾಸಿಯಾಗಿದೆ. ಯಾರು ಕೂಡ ಶಾಂತಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಮೊಹರಂ ಹಬ್ಬವನ್ನು ಶಾಂತಿಯೂತವಾಗಿ ಆಚರಿಸುವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು.
ತಹಸೀಲ್ದಾರರಾದ ಮಂಜುನಾಥ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್,
ಡಿವೈಎಸ್ ಪಿ ರುದ್ರೇಶ ಉಜ್ಜನಕೊಪ್ಪ, ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ, ನಗರಠಾಣೆ ಪಿಐ ಅಡಿವೇಶ, ನಗರಸಭೆ ಫೌರಾಯುಕ್ತ ವಿರುಪಾಕ್ಷಮೂರ್ತಿ, ಜೆಸ್ಕಾಂ ಎಇಇ ವೀರೇಶ, ಪಿಎಸ್ ಐ
ಪಿಎಸ್ ಐ ಗಳದಾ ವೆಂಕಟೇಶ ಚವ್ಹಾಣ, ಕಾಮಣ್ಣ ಸೇರಿ ವಿವಿಧ ಸಮುದಾಯದ ಮುಖಂಡರು ಇದ್ದರು.