ಮೊಹರಂ “ಸೌಹಾರ್ದತೆಗೆ ಸಾಕ್ಷಿ”ಹಿಂದು ಮುಸ್ಲಿಂರ “ಭಾವೈಕ್ಯತೆ ಸಂಕೇತ”


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.30:- ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹಬ್ಬ ಆಚರಣೆಗಳು ನಡೆಯುತ್ತವೆ ಆದ್ರೆ ಕೆಲವೊಂದು ಧಾರ್ಮಿಕ ಆಚರಣೆಗಳು ಆಯಾ ಸ್ಥಳೀಯ ವೈಶಿಷ್ಟ್ಯತೆಗೆ ಹಿಂದು ಮುಸ್ಲಿಂರ ಭಾವೈಕ್ಯತೆ ಸೌಹಾರ್ದತೆ ಸಂಕೇತ ಮೊಹರಂ ಸಾಕ್ಷಿ ಮತ್ತೊಷ್ಟು ಪುಷ್ಠಿ ನೀಡುತ್ತವೆ.
ಹರಪನಹಳ್ಳಿ ಪಟ್ಟಣದಲ್ಲಿ  ಮೊಹರಂ ಹಬ್ಬ ಅಂತಹದ್ದೇ ವೈಶಿಷ್ಟ್ಯತೆಯನ್ನು ವೈಭವಿಕರಿಸುತ್ತದೆ ತಲೆ ತಲ‍‍ಾಂತರಗಳಿಂದಲೂ ನಗರದಲ್ಲಿ  ಹಿಂದೂ ಮುಸ್ಲಿಂರು ಪರಸ್ಪರ ಬಾಂಧವ್ಯದಿಂದ ಶ್ರದ್ಧಾ ಭಕ್ತಿ ಶಾಂತಿ ಸೌಹಾರ್ದತೆಯಿಂದ ಮೊಹರಂ ಹಬ್ಬವನ್ನ ಪಕ್ಕೀರಸ್ವಾಮಿಯ ಮೂರ್ತಿಗಳನ್ನು ಪಟ್ಟಣ ಸೇರಿ ವಿವಿಧ ಹಳ್ಳಿಗಳಲ್ಲಿ ಪ್ರತಿಷ್ಠಾಪನೆಯಾಗಿ ಐದು ದಿನಗಳವರೆಗೆ ಪಕ್ಕೀರಸ್ವಾಮಿ (ಪಂಜಾ)ಗೆ ಹರಕೆಹೊತ್ತ ಕೆಲ ಭಕ್ತರು ಮೈಗೆ ಹುಲಿಬಣ್ಣ, ಕೊರಳಲ್ಲಿ ಹಾರ, ಕಣ್ಣುಬ್ಬು ಮೀಸೆ ಹಚ್ಚುತ್ತಾರೆ. ಧರ್ಮ, ಜಾತಿ ಭೇದವೆನ್ನದೆ ಭಕ್ತರು, ಚಿಕ್ಕವರು, ವೃದ್ಧರು ಹುಲಿವೇಷ ಹಾಕಿಕೊಂಡು ಐದು ದಿನ ತಮಟೆ ವಾದನಕ್ಕೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಾರೆ. ಇಲ್ಲಿ ದೇವರಿಗೆ ಹರಕೆಗಳನ್ನು ಅಂದುಕೊಂಡಂತೆ ಒಪ್ಪಿಸುತ್ತಾರೆ. ಬೆಲ್ಲದ ಹರಕೆ, ಪಾನಕದ ಹರಕೆ .ಹೂವು ಲೋಬಾನಾ, ಮಂಡಕ್ಕಿ, ಸಕ್ಕರೆಯನ್ನು ಅರ್ಪಿಸುತ್ತಾರೆ.
10 ದಿನದ ವಿಶೇಷ: ಪಟ್ಟಣದಲ್ಲಿ ಸತತ 10 ದಿನಗಳ ಕಾಲ ಆಚರಿಸುವ ಮೊಹರಂದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. 1ರಿಂದ 5ನೇ ದಿನ ಮೊಹರಂ ಎಂದು ಆಚರಿಸಿದರೆ, 5ನೇ ದಿನ ಜಿಹಾಲ್ ಎಂದು, 7ನೇ ದಿನ ಖಾಸಿಂ ಪೀರಾ ಸವಾರಿ, 8ನೇ ದಿನ ಮೌಲಾಲಿ ಪೀರಾ ಸವಾರಿ, 9ನೇ ದಿನ ಹಸನ್‌-ಹುಸೇನ್‌ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್‌ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿಯಾಗಿರುತ್ತದೆ.
ಗುಂಡಿನಕೇರಿ, ಕೊಟ್ಟೂರು ರಸ್ತೆ, ಕಳ್ಳಿಬಾವಿಕೇರಿ, ಬಾಣಗೇರಿ, ಚಿತ್ತರ್‌ಗೇರಿ ಹಾಗೂ ಇತರೆ ಸ್ಥಳಗಳಲ್ಲಿ ಸ್ಥಾಪಿಸಲಾಗಿದ್ದ ಪಂಜಾಗಳು (ಅಲೇದೇವರು)ಸ್ಥಾಪಿಸಿದ ಪಂಜಾಗಳನ್ನು ಮೊಹರಂನ ಕಡೇ ದಿನವಾದ ಶನಿವಾರದಂದು ಸಂಜೆ ಮೆರವಣಿಗೆ ಮೂಲಕ ಹಿರೇಕೆರೆಗೆ ತೆರಳಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗುಂಡಿನಕೆರೆ ಜಮಾತಿನ ಜಬಿವುಲ್ಲಾ, ಮಾಬುಲ್ಲ ಪೀರಸಬ್ ಅಲ್ಲಭಕ್ಷು ಚಿತ್ತಾರಗೇರಿ ಕಮಿಟಿಯ ಜಿ ಚಾಂದ್ ಬಾಷಾ, ರಾಜು,ಜಿ . ಜಿ, ರಫೀ ದಾಡಪೀರ್.ಬಾಣಗೇರೆ ಜಮಾತಿನ ದಾದಾಪೀರ್ ಕೋಲ್ಕರ್, ಲಾಲ್ಚಂದ್ ಚಮನ್ ಭಾಷಾ ಸಾಬ್ ಖಾಜಾ ಹುಸೇನ್ ವಲಿ ಎನ್ ನಜೀರ್ ಸಾಬ್