ಮೊಹರಂ ಜಾತ್ರೆ ಪ್ರಯುಕ್ತ ೮,೮೬,೫೦೦ ರೂ ಮೊತ್ತಕ್ಕೆ ಹರಾಜಾದ ನೆಲ ಬಾಡಿಗೆ, ಜೋಕಾಲಿ

ಮುದಗಲ್,ಜು.೧೯-
ಮೊಹರಂ ಹಬ್ಬದ ಜಾತ್ರೆಯ ಜೋಕಾಲಿ ಮತ್ತು ನೆಲ ಬಾಡಿಗೆಯ ಸಾರ್ವಜನಿಕ ಮುಂದೂಡಿದ ಮರು ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ನಬಿ ಎಂ ಕಂದಗಲ್ ಅವರು ಆರಂಭದಲ್ಲಿ ನೆಲ ಬಾಡಿಗೆ ಮತ್ತು ಅಂಗಡಿಗಳ ವಸೂಲಿ ಹರಾಜು ಪ್ರಕ್ರಿಯೆ ನಡೆಸಿದರು ೧,೫೪,೦೦೦ ರೂಪಾಯಿ ಸರ್ಕಾರಿ ಸವಾಲುನೊಂದಿಗೆ ಆರಂಭವಾದ ಹರಾಜು ಪ್ರಕ್ರಿಯೆ ಕೊನೆಗೆ ೧,೫೫,೫೦೦ ರೂಪಾಯಿ ಸೈಯದ್ ಮುಜಾಹಿದ್ ಅವರಿಗೆ ಹರಾಜಾಯಿತು.
ನಂತರ ಹಲವು ಷರತ್ತುಗಳಾದ ಮೊಹರಂ ನಿಮಿತ್ಯ ಜೋಕಾಲಿ ನಡೆಸಲು ಬಯಸುವ ವ್ಯಾಪಾರಿ ಆಯೋಜಕರು ಸಾರ್ವಜನಿಕರ ಜೀವ ರಕ್ಷಣೆಯ ಜೀವ ವಿಮಾ ಪಾಲಿಸಬೇಕು.ಜೋಕಾಲಿ ನಡೆಸಲು ಹೆಚ್ಚಿನ ಅನುಭವ ಹೊಂದಿದ ಪ್ರಮಾಣ ಪತ್ರ ಸಲ್ಲಿಸಬೇಕು.ತೊಟ್ಟಿಲು ಅಥವಾ ಅಮೇಜಮೆಂಟ್ ಪಾರ್ಕ್ ನಡೆಸಿದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. ಜೋಕಾಲಿ ನಡೆಸುವ ವ್ಯಾಪಾರಿಗಳು ಲೈಸೆನ್ಸ್ ಪ್ರಮಾಣ ಪತ್ರ ಹಾಗೂ ಜಿ ಎಸ್ ಟಿ ಪ್ರತಿಯನ್ನು ಸಲ್ಲಿಸಬೇಕು.ಎಂದು ಷರತ್ತುಗಳನ್ನು ವಿಧಿಸಿ ಇಚ್ಛೆಯುಳ್ಳವರು ಹರಾಜು ಪ್ರಕ್ರಿಯೆ ಭಾಗವಹಿಸುವಂತೆ ಸೂಚನೆ ನೀಡಿದರು.ನಂತರ ಷರತ್ತು ಬದ್ಧ ದಾಖಲೆ ಪತ್ರಗಳನ್ನು ಸಲ್ಲಿಸಿದ ಐದು ಜನ ಜೋಕಾಲಿ ವ್ಯಾಪಾರಿಗಳ ದಾಖಲೆ ಪರಿಶೀಲನೆ ನಡೆಸಿದರು ಅದರಲ್ಲಿ ಇಬ್ಬರು ವ್ಯಾಪಾರಿಗಳಾದ ಸೈಯದ್ ಮೆನನ್ ಖಾದ್ರಿ ಮತ್ತು ನಿಜಾಮುದ್ದೀನ್ ಮುಡಿಗೇರಿ ಅವರ ಸೂಕ್ತ ದಾಖಲೆ ಇಲ್ಲದ ಕಾರಣ ಅರ್ಜಿಯನ್ನು ತಿರಸ್ಕಾರ ಮಾಡಿದರು ನಂತರ ಉಳಿದ ಮೂರು ವ್ಯಾಪಾರಿಗಳಾದ ಟು ಸ್ಟಾರ್ ಕಂಪನಿ ಮಾಲೀಕ ದಸ್ತಗೀರ ಪಾಶಾ ಮತ್ತು ಎಮ್ ಡಿ ಯೂಸುಫ್ ಹಾಗೂ ಉಮರ್ ಫಾರುಕ್ ನಡುವೆ ೩,೬೭,೪೦೦ ರೂಪಾಯಿ ಸರ್ಕಾರಿ ಮೊತ್ತದಿಂದ ಹರಾಜು ಪ್ರಕ್ರಿಯೆ ನಡೆಯಿತು.ಈ ಮೂವರು ನಡುವೆ ಏರ್ಪಟ್ಟ ಹರಾಜು ಪ್ರಕ್ರಿಯೆ ಕೊನೆಯದಾಗಿ ೭,೩೧,೦೦೦ ರೂಪಾಯಿಗೆ ಟು ಸ್ಟಾರ್ ಕಂಪನಿಯ ಮಾಲೀಕ ದಸ್ತಗೀರ ಪಾಶಾ ಗೋವಾ ಅವರು ಹೆಚ್ಚಿನ ಪ್ರಮಾಣದ ಸಂಖ್ಯೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಬಿ ಎಂ ಕಂದಗಲ್,ಮುಖ್ಯ ಇಂಜಿನಿಯರ್ ಶರಣಪ್ಪ, ಜಸ್ಪಾಲ್ ಸಿಂಗ್,ಬಸವರಾಜ ಕೊಟ್ಟರು,ಸಂಪತ್ ಕುಮಾರ್ ,ಪ್ರವೀಣ,ಬಾಬಾ,ಮಾಳಿಂಗರಾಯ,ಕುಪ್ಪಣ್ಣ,ಪವನ್ ಕುಮಾರ್ ,ಇಕ್ತಾರ್ ಪಾಶಾ ಮುಂತಾದವರು ಇದ್ದರು.