ಮೊಹರಂ ಆಚರಣೆ ಮಾಡಿ : ಅಲಾಯಿ ಕುಣಿತ ರದ್ದು- ವಿ.ಹೆಚ್ ನಾಯಕ

ಸಿರವಾರ.ಆ.೦೪- ಮೊಹರಂ ಆಚರಣೆ ಮಾಡಲು ಯಾವುದೇ ತೊಂದರೆ ಇಲ್ಲಾ ಪಟ್ಟಣದಲ್ಲಿ ಹಾಗೂ ಕಡದಿನ್ನಿ, ಬೊಮ್ಮನಾಳ, ಬಾಗಲವಾಡ ಚಿಕ್ಕಬಾದರದಿನ್ನಿ ಗ್ರಾಮಗಳಲ್ಲಿ ಅಲಾಯಿ ಕುಣಿತ ಮಾತ್ರ ರದ್ದು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಹಸೀಲ್ದಾರರ ವಿಜಯೇಂದ್ರ ಹುಲಿನಾಯಕ ಹೇಳಿದರು.
ತಹಸೀಲ್ದಾರರ ಕಚೇರಿಯಲ್ಲಿ ಬುಧುವಾರ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ ಕಳೆದ ಆರು ವರ್ಷಗಳ ಹಿಂದೆ ಗಲಾಟೆಯಾದ ಕಾರಣ ಅಲಾಯಿ ಕುಣಿತ ರದ್ದು ಮಾಡಲಾಗಿದೆ. ಕರೋನಾದಿಂದ ಎರಡು ವರ್ಷಗಳ ಕಾಲ ಆಚರಣೆಗೆ ಸರಕಾರ ನಿಷೇಧ ಮಾಡಲಾಗಿತ್ತು ಈ ಭಾರಿ ಯಾವುದೇ ತೊಂದರೆ ಯಾಗದಂತೆ ಎಲ್ಲಾರು ಶಾಂತಿ ಯುತವಾಗಿ ಆಚರಿಸಬೇಕು ಎಂದು ಸರಕಾರದ ಹಾಗೂ ಜಿಲ್ಲಾಧಿಕಾರಿಗಳು ಆದೇಶ ಪಾಲನೆ ಮಾಡಬೇಕು. ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಾಗಿದೆ. ಮಸ್ಜಿದ್, ದೇವರ ಮುಂದೆ ಅಲಾಯಿ ಕುಣಿತ ನಿಷೇಧ ಮಾಡಲಾಗಿದೆ. ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಮುಂದಿನ ದಿನಗಳಲ್ಲಿ ಅಲಾಯಿ ಕುಣಿತಕ್ಕೆ ಅವಕಾಶ ಸಿಗುವುದು ಬಿಡುವುದು ನಿಮ್ಮ ಕೈಯಲ್ಲಿದೆ ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಶಶಿಕಾಂತ ಎಂ., ಪ.ಪಂ.ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಪ.ಪಂ.ಸದಸ್ಯರು, ಮುಸ್ಲಿಂ, ಹಿಂದು ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.