
ರಾಯಚೂರು,ಏ.೨೦-
ವಿಧಾನ ಸಭಾ ಚುನಾವಣೆಯ ರಾಯಚೂರು ನಗರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನಿನ್ನೆ ತಡರಾತ್ರಿ ಘೋಷಿಸುವ ಮೂಲಕ ಕಾಂಗ್ರೆಸ್ ಪಕ್ಷವು ಅಚ್ಚರಿಯನ್ನು ಉಂಟು ಮಾಡಿದೆ.
ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ ರಾಯಚೂರು ನಗರದಲ್ಲಿ ಹೊಸ ಚರಿತ್ರೆಯನ್ನು ಬರೆಯಲು ಮುಂದಾಗಿದೆ. ಈ ಸಂದರ್ಭದಲ್ಲಿ. ಕೆಪಿಸಿಸಿ ಸಂಯೋಜಕ ಹಾಗೂ ರಾಯಚೂರು ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ಕಡಗೋಳ ಚೇತನ ಕುಮಾರ ರವರು ತಮ್ಮ ಮನೆಯ ದೇವರಾದ ಶ್ರೀ ಬೊಳಬಂಡಿ ತಿಮ್ಮಪ್ಪ ಸಾನಿಧ್ಯದಲ್ಲಿ ಅರ್ಚನೆ ಮಾಡಿ ಚುನಾವಣೆ ಅಭ್ಯರ್ಥಿಯಾದ ಮೊಹಮ್ಮದ್ ಶಾಲಂ ರವರಿಗೆ ವಿಜಯ ಮಾಲೆ ಬೀಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.