ರಾಯಚೂರು,ಜೂ.೧೭-
ರಾಯಚೂರು ನಗರದ ನಿವಾಸಿ ಅಹಮದ್ ಮೊಹಿಯುದ್ದೀನ್ ಮತ್ತು ಸಾಬಿರಾ ಬೇಗಂ ರವರ ಮಗನಾದ ಮೊಹಮ್ಮದ್ ಬದಿಯುದ್ದೀನ್ ಪರ್ವೇಜ್ ರವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ’ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್’ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮೊಹಮ್ಮದ್ ಬದಿಯುದ್ದೀನ್ ಪರ್ವೇಜ್ ಅವರು, ಯುವಿಸಿಇ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಇನಾಯತುಲ್ಲಾ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮ್ಯಾಪಿಂಗ್ ಅಂಡ್ ಸ್ಪೇಷಲ್ ಅನಾಲಿಸಿಸ್ ಆಫ್ ಲ್ಯಾಂಡ್ ಅಂಡ್ ಕ್ರಾಪ್ ಸೂಟ್ಯಾಬಿಲಿಟಿ ಫಾರ್ ಸಸ್ಟೈನೆಬಲ್ ಇರಿಗೇಷನ್ ಅಂಡ್ ವಾಟರ್ ಶೆಡ್ ಮ್ಯಾನೇಜ್ ಮೆಂಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.