ಮೊಹಮ್ಮದ್ ಅಜರಗೆ ಬೇಳ್ಕೊಡುಗೆ

ಕಲಬುರಗಿ:ಡಿ.2: ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಮೊಹಮ್ಮದ್ ಅಜರ್ ಅವರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಇಂದು ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ವತಿಯಿಂದ ಸನ್ಮಾನ ಮಾಡುವ ಮೂಲಕ ಬೇಳ್ಕೊಡುಗೆ ಕಾರ್ಯಕ್ರಮ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಯುವ ಜಾಗೃತಿ ವೇದಿಕೆ ಕಾರ್ಯದರ್ಶಿ ಸಾಜಿದ್ ಅಲಿ, ಖಜಾಂಚಿ ಹಸನ್ ಅಲಿ ಸುಲ್ತಾನಪುರಿ, ಖಾಜಿ ವಜಿದ್ ಉರ್ ರಹೇಮಾನ್ ಸಿದ್ದಿಖಿ, ನಿವೃತ್ತ ನೌಕರರಾದ ಚಾಂದ್ ಸಾಬ್, ಡಾ. ಅಬ್ದುಲ್ ರಹೇಮಾನ್, ಅಬ್ದುಲ್ ನವಾಬ್, ಸೌಕತ್ ಅಲಿ ಖಾನಸಾಬ್, ಇಬ್ರಾಹಿಮ್ ಮಂತ್ರಿ, ಮೊಹಮ್ಮದ್ ಅಕ್ರಮ್, ಜಿಲಾನಿ, ಮೊಹ್ಮದ್ ಮುಬಿನ್, ಅಬ್ದುಲ್ ಮಜಿದ್, ಅಬ್ದುಲ್ ರಜಾಕ್, ನಸೀರ್, ಮೊಹಮ್ಮದ್ ಇಮ್ರಾನ್, ಸರ್ಫರಾಜ್ ಸೇರಿದಂತೆ ಮುಂತಾದವರು ಇದ್ದರು.