ಮೊಹಮ್ಮದರಫಿಯವರ 96 ನೇ ಹುಟ್ಟು ಹಬ್ಬದಂಗವಾಗಿ ರಸಮಂಜರಿ

ಬೀದರ:ಡಿ.29:ಖ್ಯಾತ ಹಿನ್ನಲೆಗಾಯಕ ದಿವಂಗತ, ಮೊಹಮ್ಮದರಫಿಯವರ 96 ನೇ ಹುಟ್ಟು ಹಬ್ಬದ ಪ್ರಯುಕ್ತಆಕರ್ಶಕ ಸಂಗೀತರಸಮಂಜರಿಕಾರ್ಯಕ್ರಮವು
ಬೀದರಿನಡಾ.ಚನ್ನಬಸವ ಪಟ್ಟದೇವರುರಂಗ ಮಂದಿರದಲ್ಲಿ ದಿನಾಂಕ: 31-12-2020 ರಂದು ಸಾಯಂಕಾಲ 4:00 ಜರುಗಲಿದೆ. ಈ ಕಾರ್ಯಕ್ರಮದಕರ ಪತ್ರಗಳನ್ನು ಇತ್ತಿಚಿಗೆ ನಗರದಲ್ಲಿ ಬಿಡುಗಡೆ ಮಾಡಿದಕಾರ್ಯಕ್ರಮದಅಧ್ಯಕ್ಷರಾದ ಶ್ರೀ.ಕೆ.ಟಿ. ವಿಶ್ವನಾಥರವರು ಮಾತನಾಡುತ್ತಾ, ಪ್ರತಿ ವರ್ಷರಾಷ್ಟ್ರ / ಅಂತರರಾಷ್ಟ್ರ ಮಟ್ಟದಕಲಾವಿದರನ್ನು ನಗರಕ್ಕೆ ಕರೆಯಿಸಿ ಸುಮಧುರವಾದರಸ ಮಂಜರಿಕಾರ್ಯಕ್ರಮವನ್ನುಆಯೋಜಿಸುವ ಬೀದರಿನ ಹಿರಿಯಗಾಯಕ ಶ್ರೀ.ನರೇಂದ್ರದಂಡೆಯವರು ಈ ವರ್ಷವೂಅಂಥದೊಂದು ಸಾಹಸಕ್ಕೆ ಕೈ ಹಾಕಿರುವುದು ಶ್ಲಾಘನಿಯವಾಗಿದೆಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಶ್ರೀ. ವೀರಭದ್ರಪ್ಪಾಉಪ್ಪಿನರವರು, ರಾಷ್ಟ್ರದ ಹೆಮ್ಮೆಯ ಸುವಿಧಾಗೌರವ ಸಂಸ್ಥೆಯಿಂದ ನೀಡಲಾಗುವ “ಗೋಲ್ಡನ್ ವೈಸ್‍ಆಫ್ ಲತಾ ಮಂಗೇಶಕರ” ಪ್ರಶಸ್ತಿ ವಿಜೆತಅಂತರಾಷ್ಟ್ರೀಯಖ್ಯಾತ ಹಿನ್ನೆಲೆಗಾಯಕಿ ಶ್ರೀಮತಿ ಮಿಸ್ಟು ಬರ್ಧನರವರುತಮ್ಮಇಂಪಾದಧ್ವನಿಯ ಮೂಲಕ ಸಂಗೀತ ಪ್ರೇಮಿಗಳ ಮನ ಸೆಳೆಯಲಿದ್ದಾರೆ.
ಅದೆರೀತಿರಾಷ್ಟ್ರದಎಲ್ಲಾ ಸುಪ್ರಸಿದ್ಧ ಸಂಗೀತಗಾರರು ಹಾಗೂ ಗಾಯಕರಜೋತೆಗೆ ಯಶಸ್ವಿಯಾಗಿ ಗಾಯನ ಮಾಡಿರುವ ಶ್ರೀಮತಿ, ಉಷಾ ತಿಮೋತಿ, ಭಾವನ ಪಂಡಿತ, ಹಾಗೂ ಸೀಮಾ ಚಕ್ರವರ್ತಿಯವರುಅಲ್ಲದೆ ಬೀದರಿನಖ್ಯಾತ ಹಿನ್ನೆಲೆಗಾಯಕ, ಮೊಹ್ಮದರಫಿಯವರಧ್ವನಿಯ ಶ್ರೀ.ನಾಗೇಂದ್ರದಂಡೆಯವರು ಹಳೆಯ ಸೂಪರ್ ಹಿಟ್ ಹಾಡಿನ ಮೂಲಕ ಸಭಿಕರ ಮನ ರಂಜಿಸಲಿದ್ದಾರೆಂದು ತಿಳಿಸಿದರು.
ಸಮಿತಿಯ ಸದಸ್ಯರಾದ ಶ್ರೀ.ನಾರಾಯಣರಾವ ಕಾಂಬಳೆ, ಹಾಗೂ ಶ್ರೀ.ಮಾರುತಿರಾಜೇಶ್ವರಕರ್, ಈ ಸಂದರ್ಭದಲ್ಲಿ ಹಾಜರಿದ್ದರು.