ಮೊಸರು ಗಡಿಗೆ ಒಡೆಯುವ ಸ್ಪರ್ಧೆ ದಿ. 7 ರಂದು

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಸೆ2: ಚೈತನ್ಯನಗರ ನಿವಾಸಿಗಳ ಸಂಘ ಹಾಗೂ ಶ್ರೀ ಸರಸ್ವತಿ ಮಹಿಳಾ ಮಂಡಳದ ವತಿಯಿಂದ ಸೆಪ್ಟೆಂಬರ್ 7 ರಂದು ಬೆ. 11.30 ಕ್ಕೆ ಅಕ್ಷಯ ಪಾರ್ಕ್ ಮುಂದುಗಡೆ ಇರುವ ಸಂತೆ ಮೈದಾನದಲ್ಲಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮಹಾಪೌರರಾದ ಪ್ರಕಾಶ ಕ್ಯಾರಕಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಸೆಪ್ಟೆಂಬರ್ 6 ರಂದು ಮಧ್ಯೆ ರಾತ್ರಿ 12 ಗಂಟೆಗೆ ಶ್ರೀ ಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮವನ್ನು ಚೈತನ್ಯನಗರದ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಒಂದು ತಂಡದಲ್ಲಿ 11 ಜನರಿಗೆ ಮಾತ್ರ ಅವಕಾಶವಿದ್ದು, ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಗಡಿಗೆ ಒಡೆಯಬೇಕು. ಈ ಸ್ಪರ್ಧೆಯಲ್ಲಿ ಗೆದ್ದಂತಹ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ.5001, ದ್ವಿತೀಯ ಬಹುಮಾನ 2001, ತೃತೀಯ ಬಹುಮಾನ 1001 ಇರಲಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು 9448110146 ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದೆಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ಗಂಡಗಾಳೇಕರ, ಕಿರಣ ಬಗಾಡೆ, ಮುಕುಂದ ಗುಗ್ರಿ ಉಪಸ್ಥಿತರಿದ್ದರು.