ಮೊಸರು ಗಡಿಗೆ ಒಡೆದು ಗೋಪಾಲ ಕಾವಲಿ ಆಚರಣೆ

ಶಹಾಬಾದ:ಜು.5:ನಗರದ ಹಳೆ ಶಹಾಬಾದ ಬಡಾವಣೆಯಲ್ಲಿ ಮಾಲಿ ಪಾಟೀಲ ಅವರ ಮನೆಯಲ್ಲಿ ಆಷಾಢ ಮಹೋತ್ಸವ ನಿಮಿತ್ತ ರುಕ್ಮಣಿ ಪಾಂಡುರಂಗ ದೇವರ ಭವ್ಯ ಮೆರವಣಿಗೆ ಹಾಗೂ ಮೊಸರು ಗಡಿಗೆ ಒಡೆದು ಗೋಪಾಳ ಕಾವಲಿ ಆಚರಿಸಲಾಯಿತು.

ಬೆಳಗ್ಗೆ ರುಕ್ಮಣಿ ಪಾಂಡುರಂಗ ದೇವರಿಗೆ ಕಾಕಡಾರತಿ, ಮಹಾಪೂಜೆ, ಮಹಾಮಂಗಳಾರತಿ ನಂತರ ಭವ್ಯ ಮೆರವಣಿಗೆ ನಡೆಯಿತು. ಅಶೋಕ ವೃತ್ತದಲ್ಲಿ ಶ್ರೀಕೃಷ್ಣನ ಬಾಲ ಲೀಲೆಗಾಳಾದ ಗೋಲಿ, ಚಂಡಿನಾಟ, ಲಗೋರಿ, ಹುಲಿ, ನರಿಯಾಟ ಸೇರಿದಂತೆ ಹಲವಾರು ಆಟಗಳನ್ನು ಆಡಲಾಯಿತು. ನಂತರ ಮೊಸರು ಗಡಿಗೆ ಒಡೆಯುವ ಮೂಲಕ ಗೋಪಾಲ ಕಾವಲಿ ಆಚರಿಸಲಾಯಿತು. ನಂತರ ಮೆರವಣಿಗೆ ಉದ್ದಕ್ಕೂ ವಿವಿಧ ವಾದ್ಯ, ಭಜನೆಗಳೊಂದಿಗೆ ಗ್ರಾಮದ ಹೊರ ಭಾಗದಲ್ಲಿರುವ ಬಾವಿಯಲ್ಲಿ ದೀಪವನ್ನು ವಿಸರ್ಜಿಸುವ ಮೂಲಕ ಆಷಾಡ ಮಹೋತ್ಸವ ಸಂಪನ್ನಗೊಂಡಿತು. ನಂತರ ಮಹಾ ನೈವೇಧ್ಯ, ಮಹಾಪ್ರಸಾದ ವಿತರಣೆ ನಡೆಯಿತು. ಋತ್ವಿಜರಾದ ವಾಸುದೇವಾಚಾರ್ಯ ಜೋಶಿ, ಕೆ.ರಮೇಶ ಭಟ್ಟ ಅವರಿಂದ ಪೂಜೆ ನಡೆಯಿತು. ಮಾಲಿ ಪಾಟೀಲ ಮನೆತನದ ಆನಂತರಾವ ಮಾಲಿ ಪಾಟೀಲ, ಗುರುರಾಜ ಮಾಲಿ ಪಾಟೀಲ, ಶ್ರೀಧರ ಮಾಲಿ ಪಾಟೀಲ, ಭೀಮಸೇನರಾವ ಮಾಲಿ ಪಾಟೀಲ, ವಾಮನರಾವ ಮಾಲಿ ಪಾಟೀಲ, ಅಪ್ಪಾರಾವ ಮಾಲಿ ಪಾಟೀಲ, ದತ್ತಾತ್ರೇಯ ಮಾಲಿ ಪಾಟೀಲ, ವಿಜಯವಿಠಲ ಮಾಲಿ ಪಾಟೀಲ ಅನೀಲ ಮಾಲಿ ಪಾಟೀಲ, ಗೋಪಾಲಾಚಾರ್ಯ ಜೋಶಿ, ರಾಘವೇಂದ್ರ ಕರಗಲಿಕರ್, ಸತ್ಯನಾರಾಯಣ ಮಾಲಿ ಪಾಟೀಲ, ರಾಹುಲ್ ಮಾಲಿ ಪಾಟೀಲ, ಅಚ್ಯುತ್ ಮಾಲಿ ಪಾಟೀಲ, ಸಂದೀಪ ಮಾಲಿ ಪಾಟೀಲ, ಸುಮೀತ ಮಾಲಿ ಪಾಟೀಲ, ವಿಶಾಲ ಪಾಟೀಲ, ವಿಕಾಶ ಪಾಟೀಲ, ಗೋಪಾಲ ಪಾಟೀಲ, ಮೂರ್ತಿ ದಿಕ್ಷೀತ, ಶರದ್ ಅಗ್ನಿಹೋತ್ರಿ

ಗ್ರಾಮದ ಮುಖ್ಯಸ್ಥರಾದ ಶಿವರಾಜ ಪಾರಾ, ಶ್ರೀಶೈಲ ಬೆಳಮಗಿ, ಚನ್ನಪ್ಪಗೌಡ ಪೊಲೀಸ ಪಾಟೀಲ, ಅಪ್ಪಾಸಾಹೇಬ ಹುಗ್ಗಿ, ಶರಣಪ್ಪ ಕೊಡದೂರ, ಮಲ್ಲಿಕಾರ್ಜುನ ಚಂದನಕೇರಿ, ಶ್ರೀಶೈಲ ಬಡಿಗೇರ, ಶಿವಪುತ್ರ ಕುಂಬಾರ, ಭೀಮರಾವ ಸೂಗೂರ ಸೇರಿದಂತೆ ಶಂಕರಲಿಂಗೇಶ್ವರ ಭಜನಾ ಮಂಡಳಿ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.