ಮೊಸರಿನ ಶ್ಯಾವಿಗೆ ಚಾಟ್

ಬೇಕಾಗುವ ಪದಾರ್ಥಗಳು:

 • ತೆಳುಶ್ಯಾವಿಗೆ – ೧ ಪ್ಯಾಕ್
 • ತುಪ್ಪ – ೧ ಟೀ ಚಮಚ
 • ಸಾಸಿವೆ – ೧ ಚಮಚ
 • ಕಡ್ಲೆಬೇಳೆ – ೨ ಚಮಚ
 • ಉದ್ದಿನಬೇಳೆ – ೨ ಚಮಚ
 • ಕರಿಬೇವು – ರುಚಿಗೆ ತಕ್ಕಷ್ಟು
 • ತುರಿದ ಶುಂಠಿ – ರುಚಿಗೆ ತಕ್ಕಷ್ಟು
 • ಕತ್ತರಿಸಿದ ಹಸಿಮೆಣಸಿನಕಾಯಿ – ರುಚಿಗೆ ತಕ್ಕಷ್ಟು
 • ಮೊಸರು – ಅರ್ಧ ಲೋಟ
 • ಉಪ್ಪು – ರುಚಿಗೆ ತಕ್ಕಷ್ಟು
 • ಮಾವಿನಕಾಯಿತುರಿ – ರುಚಿಗೆ ತಕ್ಕಷ್ಟು
 • ಚಾಟ್ ಮಸಾಲ – ರುಚಿಗೆ ತಕ್ಕಷ್ಟು
 • ಕೊತ್ತಂಬರಿ ಸೊಪ್ಪು – ೧ ಹಿಡಿ
 • ನಿಂಬೆರಸ – ೧ ಹೋಳು
 • ಹಸಿಈರುಳ್ಳಿ, ಹಸಿದ್ರಾಕ್ಷಿ (ಒಣದ್ರಾಕ್ಷಿ) ಮತ್ತು ದಾಳಿಂಬೆ – ರುಚಿಗೆ ತಕ್ಕಷ್ಟು

ವಿಧಾನ:

 • ಕುದ್ದನೀರಿಗೆ ತೆಳುಶ್ಯಾವಿಗೆ ಹಾಕಿ ಇಳಿಸಿ. ೫ ನಿಮಿಷ ನೆಂದು, ಬೆಂದ ಮೇಲೆ ನೀರು ಬಸಿಯಬೇಕು. ತಣ್ಣೀರು ಹಾಕಿ ಇನ್ನೊಂದು ಸಲ ಬಸಿಯಬೇಕು.
 • ತುಪ್ಪಕ್ಕೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು, ತುರಿದ ಶುಂಠಿ, ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ತಯಾರಿಸಬೇಕು.
 • ತಯಾರಾದ ಉದುರುದುರಾದ ಶ್ಯಾವಿಗೆಯನ್ನು ತಟ್ಟೆಗೆ ಹರಡಿ, ಅದರ ಮೇಲೆ ತಯಾರಾದ ಒಗ್ಗರಣೆ ಹಾಕಿ, ಮೇಲೆ ಉಪ್ಪು ಹಾಕಿ, ಮೊಸರು ಹಾಕಿ, ತುರಿದ ಮಾವಿನಕಾಯಿತುರಿ, ಚಾಟ್ ಮಸಾಲ, ಕೊತ್ತಂಬರಿಸೊಪ್ಪು ಉದುರಿಸಿ, ಹೆಚ್ಚಿದ ಹಸಿಈರುಳ್ಳಿ ಹಾಕಿ, ನಿಂಬೆರಸ ಹಿಂಡಿ ಕಾಯಿತುರಿ, ದಾಳಿಂಬೆ ಬೀಜ, ದ್ರಾಕ್ಷಿ ಹಾಕಬಹುದು.
 • ಇದೇ ರೀತಿ ದಪ್ಪ ಅವಲಕ್ಕಿಯನ್ನು ನೀರಲ್ಲಿ ನೆನೆಸಿ, ಹಿಂಡಿ ತೆಗೆದು, ಈ ರೀತಿ ತಯಾರಿಸಬಹುದು.