ಮೊಳಕೆ ರಾಗಿ ಸರಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು
ರಾಗಿ/ ಫಿಂಗರ್ ಮಿಲೆಟ್ ೨ ಕಪ್
ಮಾಡುವ ವಿಧಾನ
ಎರಡು ಬಟ್ಟಲು ರಾಗಿಯನ್ನು ತೆಗೆದುಕೊಳ್ಳಿ . ರಾಗಿಯನ್ನು ಎರಡು ಬಾರಿ ಚೆನ್ನಾಗಿ ನೀರಲ್ಲಿ ತೊಳೆಯಿರಿ, ೮ ಗಂಟೆಗಳ ಕಾಲ ಅದನ್ನು ನೆನೆಸಿ .
ನೆನೆಸಿದ ರಾಗಿಯಿಂದ ಎಲ್ಲಾ ನೀರನ್ನು ಶೋಧಿಸಿಕೊಂಡು ಶುದ್ಧ ಹತ್ತಿ ಬಟ್ಟೆಗೆ ವರ್ಗಾಯಿಸಿ.ಅದನ್ನು ಬಿಗಿಯಾಗಿ ಒಂದು ಪೊಟ್ಲಿ ಯಂತೆ ಗಟ್ಟಿಯಾಗಿ ಕಟ್ಟಿ .
ಬೆಚ್ಚಗಿನ ಸ್ಥಳದಲ್ಲಿ ಇಡಬೇಕು ಉಷ್ಣಾಂಶ ಹೆಚ್ಚಿರುವ ಕಡೆ ಇಟ್ಟರೆ ಬೇಗ ಹಾಗು ಚೆನ್ನಾಗಿ ಮೊಳಕೆ ಬರಲು ಸಹಾಯ ವಾಗುತ್ತದೆ.
೮ ಗಂಟೆಗಳ ನಂತರ ಸುಂದರವಾದ ರಾಗಿ ಮೊಳಕೆಯನ್ನು ನೋಡಬಹುದು.
ಸೂರ್ಯನ ಶಾಖವನ್ನು ಅವಲಂಬಿಸಿ ೨೪ ರಿಂದ ೪೮ ಗಂಟೆಗಳವರೆಗೆ ಬಿಸಿಲಿನಲ್ಲಿ ಒಣಗಿಸಿ .
ಎರಡು ದಿನದ ನಂತರ ಮೊಳಕೆ ರಾಗಿ ಒಣಗಿದ್ದು ಪುಡಿ ಮಾಡಲು ಸಿದ್ಧವಾಗಿರುತ್ತದೆ .
ಒಣಗಿಸಿದ ಮೊಳಕೆಯೊಡದ ರಾಗಿಯನ್ನು. ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಚೆನ್ನಾಗಿ ಬಣ್ಣ ಬದಲಾಗುವ ತನಕ ಹುರಿದುಕೊಳ್ಳ ಬೇಕು.
ತಂಪಾಗಿಸಿದ ನಂತರ ಅದನ್ನು ಮಿಕ್ಸರ್ ನಿಂದ ನಯವಾದ ಪುಡಿ ಮಾಡಿ. ಅಥವಾ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಿಸಬಹುದು.
ಮೊಳಕೆ ರಾಗಿ ಪುಡಿಯನ್ನು ಜರಡಿ ಮಾಡಬೇಕು .
ಪುಡಿಯನ್ನು ಒಳ್ಳೆಯ ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಿಸಿಡಿ. ಬೇಕಾದಾಗ ಉಪಯೋಗಿಸಬಹುದು.