
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜ.22: ಪಟ್ಟಣದ ಡಿಗ್ರಿ ಕಾಲೇಜ್ ಆವರಣದಲ್ಲಿ ಇಂದು ಪೋಲೀಸ್ ಮತ್ತು ಪತ್ರಕರ್ತರ ನಡುವೆ ಸ್ನೇಹ ಪೂರ್ವ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಪೋಲೀಸ್ ಮತ್ತು ಪತ್ರಕರ್ತರು ತಮ್ಮ ತಮ್ಮ ಕಾಯಕ ಮತ್ತು ಬದುಕಿನ ಜಂಜಾಟದ ಮಧ್ಯೆ ಮನರಂಜನೆ ಎನ್ನೋದೆ ಮರೆತಂತೆ ಆಗಿದ್ದು, ಒಂದು ದಿನದ ಮಟ್ಟಿಗಾದರೂ ಕ್ರೀಡೆ ಮತ್ತು ರಸಮಂಜರಿಯಲ್ಲಿ ಭಾಗವಹಿಸುವ ಸಲುವಾಗಿ ಸಿಪಿಐ ಸತೀಶ್ ರವರು ಅಧ್ಯಕ್ಷತೆಯಲ್ಲಿ ಪಿಎಸ್ಐ ಪಾಂಡುರಂಗಪ್ಪರವರ ನೇತೃತ್ವದಲ್ಲಿ ಇಂದು ಅದ್ದೂರಿಯಾದ ವಾಲಿಬಾಲ್ ಪಂದ್ಯದಲ್ಲಿ ನಡೆಯಿತು.
ಮೂರು ಸುತ್ತಿನ ಪಂದ್ಯವಳಿ ತಲಾ ಒಂದೊಂದು ಪಂದ್ಯ ಗೆದ್ದ ನಂತರ ಅಂತಿಮ ಸುತ್ತಿನಲ್ಲಿ ಪೋಲೀಸ್ ಇಲಾಖೆಯೆ ಮೇಲುಗೈ ಸಾಧಿಸಿ ಪಂದ್ಯ ಗೆದ್ದುಕೊಂಡಿತು.
ಈ ಸಂದರ್ಭದಲ್ಲಿ ಪೋಲೀಸ್ ಸಿಬ್ಬಂದಿ ಮತ್ತು ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.