ಮೊಳಕಾಲ್ಮೂರಿನಲ್ಲಿ ಗಡಿ ಅಪರಾಧ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು.16: ಗಡಿಗಳಲ್ಲಿ ನಡೆಯುವ ಅಪರಾಧ ಕೃತ್ಯಗಳ ಪತ್ತೆ ಹಚ್ಚುವ ಸಲುವಾಗಿ ಗಡಿ ಅಪರಾಧ ಸಭೆ ನಡೆಸಲಾಗುವುದೆಂದು ಎಚ್.ಬಿ.ರಮೇಶ್ ಕುಮಾರ್ ಪೋಲಿಸ್ ಉಪಾಧೀಕ್ಷಕರು ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಅಯೋಜಿಸಿದ್ದ ಬಳ್ಳಾರಿ, ಚಿತ್ರದುರ್ಗ,ದಾವಣಗೆರೆ, ಪಾವಗಡ ,ಮಧುಗಿರ ಮತ್ತು ಆಂದ್ರಪ್ರದೇಶದ ಗಡಿಯ ವಿಭಾಗೀಯ ಗಡಿ ಅಪರಾಧ ಸಭೆಯಲ್ಲಿ ಮಾತನಾಡುತ್ತಾ, ಗಡಿಯಲ್ಲಿ ಕೊಲೆ, ರಾಬೀರಿ,ಕಳ್ಳತನ ಗಳಂತಹ ಅಪರಾಧ ಕೃತ್ಯಗಳು  ನಡೆದು ಸಂಶಯಾಸ್ಪದವಾಗಿ ಉಳಿದ ಕೇಸ್ ಗಳ ಬಗ್ಗೆ ಗಡಿ ಅಪರಾಧ ಸಭೆಯಲ್ಲಿವಿಷಯ ವಿನಿಮಯ ಮಾಡಿಕೊಳ್ಳ ಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ರಾಮಕೃಷ್ಣ ಡಿಎಸ್ ಪಿ ರವರು ಗಡಿ ಬಾಗದಲ್ಲಿ ನಡೆದ ಅಪರಾಧ ಕೃತ್ಯಗಳು ಹಲವು ದಿನಗಳೂ ಕಳೆದರು ಪತ್ತೆ ಯಾಗದೆ ಉಳಿದಿರುತ್ತವೆ , ಅಂತಹ ಕೇಸ್ ಗಳ ಬಗ್ಗೆ ಗಡಿ ಅಪರಾಧ ಸಭೆ ಗಳಲ್ಲಿ ವಿನಿಮಯವಾಗಿ ಚರ್ಚಿಸಿದಾಗ ಕೃತ್ಯಗಳ ಬಗ್ಗೆ ಮುಕ್ತ ವಾಗಿ ಸ್ಪಷ್ಟ ಮಾಹಿತಿ ತಿಳಿದು ಕೊಳ್ಳ ಬಹದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಡೀಸಿನಲ್ ಡಿಎಸ್ ಪಿ ಕನಿಕಾ ರವರು ಮಾತನಾಡಿದರು,
ಈ ಸಂದರ್ಭದಲ್ಲಿ  ದಾವಣಗೆರೆ, ಚಿತ್ರದುರ್ಗ, ಪಾವಗಡ, ಮಧುಗಿರಿ, ಮತ್ತು ಮೊಳಕಾಲ್ಮೂರು ಪೋಲಿಸ್ ಠಾಣೆ ಅಧಿಕಾರಿಗಳ ಜೊತೆ ಪಕ್ಕದ ಅಂದ್ರ ಪ್ರದೇಶದ ಬ್ರಹ್ಮ ಸಮುದ್ರದ  ಪೋಲಿಸ್ ಅಧಿಕಾರಿಗಳು ಈ ಗಡಿ ಅಪರಾಧ ಸಭೆ ಯಲ್ಲಿ ಭಾಗವಹಿಸಿದರು.