
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಸ.12: ಇಂದು ತಾಲೂಕು ರೈತ ಸಂಘ, ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಲು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನಾದ್ಯಂತ ಮಳೆ ಇಲ್ಲದೆ ಬೆಳೆಗಳು ಒಣಗಿ ತಾಲೂಕಿಗೆ ಬೀಕರ ಬರ ಅವರಿಸಿದ್ದು, ರೈತರು ಕಂಗಾಲಾಗಿ ದ್ದಾರೆ. ಸಾರ್ವಜನಿಕ ಜೀವನ ಕಷ್ಟಕರವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂತ್ತಿದ್ದಾರೆ ಸರ್ಕಾರ ಮೀನಾ- ಮೇಷ ಏಣಿಸದೆ ಕೂಡಲೇ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸಿದೆ, ಯಾವುದೇ ಸಬೂಬು ಹೇಳದೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿ ಜನರಿಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಂಡು ಜನರ ನೆರವಿಗೆ ಧಾವಿಸಬೇಕು
ಬರಗಾಲಕ್ಕೆ ತುತ್ತಾದ ರೈತರಿಗೆ ಎಕರೆ ಒಂದಕ್ಕೆ ಮೂವತ್ತು ಸಾವಿರದಂತೆ ಪರಿಹಾರ ನೀಡಬೇಕು, ರೈತರ, ಕೂಲಿ ಕಾರ್ಮಿಕರ ಮಹಿಳೆಯರ ಸಾಲವನ್ನು ಯಾವುದೇ ಷರತ್ತು ವಿಧಿಸಿದೆ ಸಂಪೂರ್ಣ ಮನ್ನಾ ಮಾಡಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಾಲಿ ಇರುವ 100 ದಿನದ ಕೆಲಸವನ್ನು 200 ದಿನಕ್ಕೆ ಹೆಚ್ಚಿಸಬೇಕು ಹಾಗೂ ಇನ್ನೂ ಇತರ ಹಕ್ಕೊತ್ತಾಯ ಗಳನ್ನು ತಾಲೂಕು ಕಚೇರಿ ಶೀರಸ್ಥೇದಾರರಾದ ಪಿ. ಎನ್.ಆಂಜನಪ್ಪ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾ ರೈ ಸಂ ಉಪಾಧ್ಯಕ್ಷ ಬೇಡರಡಿಹಳ್ಳಿ ಬಸವರಡ್ಡಿ, ತಾ ರೈ ಸಂ ಅದ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಎಸ್. ಟಿ. ಚಂದ್ರಣ್ಣ,ಕನಕ ಶಿವಮೂರ್ತಿ, ಪಿ. ಟಿ. ನಿಂಗಣ್ಣ,ದಡ್ಡಯ್ಯ, ನಾಗರಾಜ್ ಇನ್ನು ಮುಂತಾದವರಿದರು.
One attachment • Scanned by Gmail