ಮೊರೋಕ್ಕೋ ಭೂಕಂಪನ: 1000ಕ್ಕೂ ಹೆಚ್ಚು ಮಂದಿ ಸಾವು: 700 ಮಂದಿ ಚಿಂತಾಜನಕ

ನವದೆಹಲಿ/ ಮೊರೊಕ್ಕೋ, ಸೆ.9-  ವಿಶ್ವ ಪಾರಂಪರಿಕ ತಾಣವಾಗಿರುವ ಮೊರಕ್ಕೋದಲ್ಲಿ ಪ್ರಭಲ ಭೂಕಂಪನ ಸಂಭವಿಸಿದ ಪರಿಣಾಮ ಕನಿಷ್ಠ 1000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು 700ಕ್ಕೂ ಅಧಿಕ ಮಂದಿ ಸ್ಥಿತಿ ಚಿಂತಾಜನಕವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

1037 ಮಂದಿ ಸಾವನ್ನಪ್ಪಿದ್ದು 1204 ಮಂದಿ ಗಾಯಗೊಂಡಿದ್ದಾರೆ.ಅದರಲ್ಲಿ 721ಕ್ಕೂ ಅಧಿಕ ಮಂದಿ ಸ್ಥಿತಿ ಏನೂ ಹೇಳತೀರದಾಗಿದೆ.

ರಿಕ್ಟರ್ ಮಾಪನದಲ್ಲಿ 6.8 ತೀವ್ರತೆಯ ಭೂಕಂಪನದಿಂದ ಮೊರೊಕ್ಕೋದ ಹಳೆಯ ನಗರವನ್ನು ಸುತ್ತುವರೆದಿರುವ ಕೆಂಪು ಗೋಡೆಗಳು ಮತ್ತು ಯೊನೆಸ್ಲೋ  ವಿಶ್ವ ಪರಂಪರೆಯ ತಾಣದಲ್ಲಿ ಸಂಭವಿಸಿದ ಭೂಕಂಪನದಿಂದ ಕಟ್ಟಡದ ಅವಶೇಷದಡಿ ಸಿಲುಕಿದ ಮಂದಿಯ ರಕ್ಷಣೆ ಭರದಿಂದ ಸಾಗಿದೆ.

ಉತ್ತರ ಆಫ್ರಿಕಾದ ದೇಶದಲ್ಲಿ 120 ವರ್ಷಗಳ ಇತಿಹಾಸದಲ್ಲಿ ಹಿಂದೇಂದೂ ಕಂಡು ಕೇಳರಿಯದ ಪ್ರಭಲ ಭೂಕಂಪನ ಇದಾಗಿದೆ.

ಪ್ರಬಲವಾದ ಭೂಕಂಪನದಿಂದ ಸುಮಾರು 1000 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  ಭೂಕಂಪದ ಕೇಂದ್ರ ಭಾಗ ಮರ್ರೆಕೇಶ್‌ನ ಪಶ್ಚಿಮಕ್ಕೆ 72 ಕಿಲೋಮೀಟರ್ ದೂರದಲ್ಲಿದೆ, ಇದು ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಹಳೆಯ ನಗರ ಸುತ್ತುವರೆದಿರುವ ಮತ್ತು ಯುನೆಸ್ಲೋ ವಿಶ್ವ ಪರಂಪರೆಯ ತಾಣವಾಗಿದೆ ಎಂದು ತಿಳಿಸಿದ್ದಾರೆ.

ಅಮೇರಿಕಾದ ಭೂಗರ್ಭ ಶಾಸ್ತ್ರ ಇಲಾಖೆಯ ಪ್ರಕಾರ  ಭೂಕಂಪನ ಆರಂಭದಲ್ಲಿ 6.8 ರ ತೀವ್ರತೆ ಹೊಂದಿದ್ದು   ಪ್ರಭಲ ಭೂಕಂಪನ ದಿಂದ ಹಲವಾರು ಸೆಕೆಂಡುಗಳ ಕಾಲ ಭೂಮಿ ನಡುಗಿತು. ಇದರಿಂದ ಕಟ್ಟೆಗಳು ಕುಸಿದು ಬಾರಿ ಸಾವು ನೋವಿಗೆ  ಕಾರಣವಾಗಿದೆ  ಎಂದು  ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್  ತಿಳಿಸಿದೆ.

ಮೊದಲ ಭೂಕಂಪದ 19 ನಿಮಿಷಗಳ ನಂತರ 4.9 ರಿಕ್ಟರ್ ಮಾಪಕದಲ್ಲಿ ನಂತರದ  ಎರಡನೇ ಭೂಕಂಪನ ಆಘಾತದಿಂದ ಅಪಾರ ಸಾವು ನೋವಿಗೆ ಕಾರಣವಾಗಿದೆ.

6.8 ತೀವ್ರತೆಯ ಕಂಪನದ ಬಳಿಕ ಕಿರುಚಾಟದಿಂದ ಜನರು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.